ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ವಿದೇಶಕ್ಕೆ ಕಳುಹಿಸಿದ್ದು ಏಕೆ...? ಹೋಟೆಲ್ ಗೆ ನೋಟಿಸ್

ಬೆಂಗಳೂರು - ಒಮಿಕ್ರಾನ್ ಸೊಂಕೀತ ಹೊಟೇಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ದಕ್ಷಿಣ ಆಫ್ರಿಕಾ ಪ್ರವಾಸಿಗನಿಗೆ ದುಬೈಗೆ ತೆರಳಲು ಅವಕಾಶ ಮಾಡಿಕೊಟ್ಟ ವಸಂತ ನಗರದ ಶಾಂಗ್ರಿಲಾ ಹೊಟೇಲ್ ಗೆ ನೊಟೀಸ್ ನೀಡಲಾಗಿದೆ. ದಕ್ಷಿಣ ಆಫ್ರಿಕಾ ಪ್ರಜೆಯು ನ.‌20 ರಂದು ಬೆಂಗಳೂರು ಅಂತ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊವೀಡ್ ಟೆಸ್ಟ್ ಒಳಪಟ್ಟಿದ್ದರು. ಆ ವೇಳೆ ಕೊವೀಡ್ ಪಾಸಿಟಿವ್ ಧೃಡವಾಗಿತ್ತು.

ಈ ಸಂಬಂದ ಹೊಟೇಲ್ ಕ್ವಾರಂ ಟೈನ್ ಆಗಿದ್ದ ಪ್ರವಾಸಿಗ ಜಿನೋಮ್ ಸಿಕ್ವೆನ್ಸಿಂಗ್ ಟೆಸ್ಟ್ ಕಳುಹಿಸಲಾಗಿತ್ತು. ಅದರ ವರದಿ ಬರುವ ಮುನ್ನವೇ ದುಬೈಗೆ ಹಾರಲು ಅವಕಾಶ ನೀಡಿರೋದು ಹಾಗೂ ಮದ್ಯೆ ಸಭೆಯೊಂದರಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದು ಉಲ್ಲಂಘನೆ ಆಗಿದೆ. ಕರ್ನಾಟಕ ಸಾಂಕ್ರಾಮಿಕ ಖಾಯಿಲೆ ಸುಗ್ರಿವಾಜ್ಞೆ 2020 ಹಾಗೂ 2005 ರ ಉಲ್ಲಂಘನೆ ಆರೋಪದಡಿ ಕಾರಣ ಕೇಳಿ ಬಿಬಿಎಂಪಿ ಹೊಟೇಲ್ ಗೆ ನೊಟೀಸ್ ನೀಡಿದೆ.

Edited By : Nirmala Aralikatti
Kshetra Samachara

Kshetra Samachara

04/12/2021 11:30 am

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ