ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೂರನೇ ಅಲೆಯಲ್ಲಿ 600 ಪೊಲೀಸರಿಗೆ ಕೊರೊನಾ

ಬೆಂಗಳೂರು:ಪೊಲೀಸರ ಬೆನ್ನಟ್ಟಿರುವ ಕೊರೊನಾ ಸವಾರಿ ಮುಂದುವರೆದಿದೆ. ನಗರದಲ್ಲಿ ಈ ವರೆಗೆ 618 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಇಂದು ಒಂದೇ ದಿನ 114 ಜನ ಪೊಲೀಸರಿಗೆ ಪಾಸಿಟಿವ್ ಬಂದಿದೆ.

ಈ‌ವರೆಗೆ ಕೇವಲ 36 ಜನ ಸಿಬ್ಬಂದಿ ಮಾತ್ರ ಕೋವಿಡ್ ನಿಂದ ಗುಣಮುಖರಾಗಿದ್ದು ಉಳಿದೆಲ್ಲಾ ಪೊಲೀಸರು ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 618 ಪೊಲೀಸರಲ್ಲಿ ಇದುವರೆಗೂ ಓರ್ವ ಸಿಬ್ಬಂದಿ ಮಾತ್ರ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ಉಳಿದೆಲ್ಲಾ ಪೊಲೀಸ್ರಿಗೂ ಡಬಲ್ ಡೋಸ್ ತೆಗೆದುಕೊಂಡಿದ್ದಾರೆ. ಇನ್ನು ಇಂದು 23 ಜನ ಪೊಲೀಸರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರೋದು ಸಂತೋಷದ ವಿಷಯವಾಗಿದೆ. ವಾಹನ ತಪಾಸಣೆ ಮತ್ತು ಮಾಸ್ಕ್ ಫೈನ್ ಹಾಕುವ ಸಿಬ್ಬಂದಿಯಲ್ಲೇ ಕೊರೊನ ಹೆಚ್ಚಳ‌ ಹಿನ್ನೆಲೆ ಸಿಬ್ಬಂದಿ ಆತಂಕದಲ್ಲೇ ಡ್ಯೂಟಿ ಮಾಡೋ ಅನಿವಾರ್ಯ ಸ್ಥಿತಿ ಎದುರಾಗಿದೆ.

Edited By : Nagaraj Tulugeri
Kshetra Samachara

Kshetra Samachara

15/01/2022 06:34 pm

Cinque Terre

1.35 K

Cinque Terre

0

ಸಂಬಂಧಿತ ಸುದ್ದಿ