ಬೆಂಗಳೂರು: ಹಬ್ಬ ಹರಿದಿನವನ್ನು ಲೇಖಿಸದ ಕೋವಿಡ್ ತನ್ನ ನಾಗಾಲೋಟ ಮುಂದುವರೆಸಿದ್ದು ರಾಜ್ಯದಲ್ಲಿಂದು 28,723 ಜನರಿಗೆ ಸೋಂಕು ಅಂಟಿದೆ. ಇದರಲ್ಲಿ ಬೆಂಗಳೂರು ಮಹಾನಗರದಲ್ಲಿ 20,121 ಜನರಿಗೆ ಸೋಂಕು ತಗುಲಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸಕಾರಾತ್ಮಕತೆ ದರ 12.98% ನಷ್ಟಿದೆ.
ಇಂದು 3,105 ಜನ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ 1,41,337 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಹಾಗೂ ಬೆಂಗಳೂರಿನಲ್ಲಿ 1 ಲಕ್ಷ 10 ಸಾವಿರ ಸಕ್ರಿಯ ಪ್ರಕರಣಗಳಿವೆ. ಇನ್ನು ರಾಜ್ಯದಾದ್ಯಂತ ಇಂದು 14 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು ಅದರಲ್ಲಿ 7 ಜನ ಬೆಂಗಳೂರಿನವರಾಗಿದ್ದಾರೆ. ಇನ್ನು 2,21,205 ಜನರನ್ನು ಕೊರೊನಾ ಪಾಸಿಟಿವಿಟಿ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
PublicNext
14/01/2022 05:53 pm