ಯಲಹಂಕ: ಸದಾ ಟ್ರಾಫಿಕ್ ಜಾಮ್, ಜನಜಂಗುಳಿ, ಬಿಜಿನೆಸ್ ಗುಂಗಲ್ಲೇ ಇರ್ತಿದ್ದ ಬೆಂಗಳೂರಿಗೀಗ ಒಮಿಕ್ರಾನ್ ಭೂತ ಜೋರಾಗೇ ಕಾಡ್ತಿದೆ. 2ನೇ ಕೊರೊನಾ ಅಲೆ ವೇಳೆ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿ, ಲಕ್ಷಾಂತರ ಜನ ಬೆಂಗಳೂರು ತೊರೆದಿದ್ದರು. ಡೆಲ್ಟಾ ದಾಳಿಗೆ ದೇಶ- ರಾಜ್ಯದ ಅರ್ಥವ್ಯವಸ್ಥೆಯೇ ಹದಗೆಟ್ಟಿತ್ತು. ಇದೀಗ ಒಮಿಕ್ರಾನ್ ಕಾಟ ಬೇರೆ. 15 ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ- ಒಮಿಕ್ರಾನ್ ಕೇಸ್ ಸಂಖ್ಯೆ ಹೆಚ್ಚಾಗ್ತಿದೆ.
ಕೊರೊನಾ ಹತೋಟಿಗೆಂದು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿತು. ಪರಿಣಾಮ ಬೆಂಗಳೂರನ್ನೇ ನಂಬಿದ್ದ ಕಾರ್ಮಿಕರು, ದಿನಗೂಲಿ ನೌಕರರು, ಬಿಜಿನೆಸ್ ಮನ್ ಗಳು ಸಂಕಷ್ಟ ಅನುಭವಿಸಿದ್ದೇ ಬಂತು. ಸಣ್ಣ- ದೊಡ್ಡ ಉದ್ದಿಮೆಗಳು ಮುಚ್ಚುವ ಸ್ಥಿತಿಗೂ ತಲುಪಿವೆ.
2 ದಿನಗಳ ಕರ್ಫ್ಯೂ ಶೇ. 90ರಷ್ಟು ಯಶಸ್ಸು ಆಗಿತ್ತು. ಒಮಿಕ್ರಾನ್ ಭೀತಿಯಲ್ಲೇ ಸಾಫ್ಟ್ ವೇರ್ ಫೀಲ್ಡ್, ಹೋಟೆಲ್ ಸಹಿತ ಬಿಜಿನೆಸ್ ವಲಯ ಚೆನ್ನಾಗೇ ಸಾಗುತ್ತಿತ್ತು. ಆದರೆ, ಯಾವಾಗ ಸರ್ಕಾರ ನೈಟ್ & ವೀಕೆಂಡ್ ಕರ್ಫ್ಯೂಗೆ ಮನಸ್ಸು ಮಾಡಿತೋ ಅಲ್ಲಿಂದ ಬಹುತೇಕ ಬಿಜಿನೆಸ್ ಡಲ್ಲಾಗಿದೆ. ಆದರೀಗ ವೀಕೆಂಡ್ ಕರ್ಫ್ಯೂ ತೆರವಾಗಿದ್ದರೂ ಇಂದು ಜನ ಭಾನುವಾರದ ರಜಾ ಮೂಡಲ್ಲೇ ಇದ್ದಾರೆ. ಶೇ. 40ರಷ್ಟು ವಾಹನ ರಸ್ತೆಗಿಳಿದಿದ್ದರೂ ಯಾವ ಪ್ರಯೋಜನ ಆಗ್ತಿಲ್ಲ. ಒಟ್ಟಾರೆ ʼಬಿಜಿನೆಸ್ ವರ್ಲ್ಡ್ʼ ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.
ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
10/01/2022 09:41 pm