ದೇವನಹಳ್ಳಿ: ರಾಜ್ಯಕ್ಕೆ ಬರ್ತಿರುವ ವಿದೇಶಿ ಪ್ರಯಾಣಿಕರಲ್ಲಿ ಇಂದು ಸಹ ಕೂಡ ಸೋಂಕು ಹೆಚ್ಚಾಗಿ ಕಂಡು ಬಂದಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಲ್ವರಿಗೆ ಸೋಂಕು ಕನ್ಫರ್ಮ್ ಆಗಿದೆ.
ಲಂಡನ್, ಕೀನ್ಯಾ, ಬ್ರಿಟನ್ ನಿಂದ ಬಂದ ನಾಲ್ವರು ಪ್ರಯಾಣಿಕಿಗೆ ಕೊರೊನಾ ಪಾಸಿಟಿವ್ ಆಗಿದೆ. ಎತಿಹಾದ್ ಏರ್ವೆಸ್ ವಿಮಾನದಲ್ಲಿ ಆಗಮಿಸಿದ 25 ವರ್ಷದ ಮಹಿಳೆ, ಕತಾರ್ ಏರ್ವೇಸ್ ವಿಮಾನದಲ್ಲಿ ಆಗಮಿಸಿದ ಲಂಡನ್ ಮೂಲದ 59 ವರ್ಷದ ವ್ಯಕ್ತಿಗೆ, ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಆಗಮಿಸಿದ ಅಮೆರಿಕಾ ಮೂಲದ 53 ವರ್ಷದ ವ್ಯಕ್ತಿ ಹಾಗೂ 15 ವರ್ಷದ ಬಾಲಕಿಗೆ ಪಾಸಿಟಿವ್ ಆಗಿದೆ.
ಸೋಂಕಿತ ನಾಲ್ವರು ಪ್ರಯಾಣಿಕರನ್ನ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಸೊಂಕೀತ ಪ್ರಯಾಣಿಕರ ಸ್ಯಾಂಪಲ್ ನ್ನು ಆರೊಗ್ಯ ಇಲಾಖೆಯ ಅಧಿಕಾರಿಗಳು ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ.
Kshetra Samachara
24/12/2021 01:28 pm