ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೇಂದ್ರ ಚುನಾವಣೆ ಆಯೋಗದಿಂದ ಮಹತ್ವದ ನಿರ್ಧಾರ !

ವರದಿ- ಗೀತಾಂಜಲಿ

ಬೆಂಗಳೂರು: ಇನ್ಮೇಲೆ ಮತದಾನ ಪಟ್ಟಿಗಾಗಿ 18 ವರ್ಷ ತುಂಬೋ ವರೆಗೂ ಕಾಯಬೇಕಿಲ್ಲ.17 ವರ್ಷ ತುಂಬಿದ ನಂತರ ಗುರುತಿನ ಚೀಟಿ ಪಡೆಯಲು ಅವಕಾಶ ಇದೆ.

ಹೌದು,ಆನ್ ಲೈನ್ ಮೂಲಕವೇ ಫಾರಂ 8 ತುಂಬಲು‌ ಅವಕಾಶ ಇದೆ.ಇಷ್ಟು ದಿನ ಜನವರಿ 1 ಕ್ಕೆ 18 ವರ್ಷ ಅಂತ ಪರಿಗಣಿಸುತ್ತಿದ್ದ ಚುನಾವಣಾ ಆಯೋಗ, ಈಗ 4 ಹಂತವಾಗಿ ದಿನಾಂಕವನ್ನ ಪರಿಗಣನೆ ಮಾಡಿದೆ.ಫಸ್ಟ್ ಜನವರಿ,ಫಸ್ಟ್ ಏಪ್ರಿಲ್,ಫಸ್ಟ್ ಜುಲೈ, ಫಸ್ಟ್ ಅಕ್ಟೋಬರ್, ಈ ನಾಲ್ಕು ತಿಂಗಳಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.

18 ವರ್ಷಕ್ಕೆ 6 ತಿಂಗಳು ಕಡಿಮೆ ಇದ್ದರೂ ಕೂಡಾ ಇವರು ಚುನಾವಣಾ ಗುರುತಿನ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ.ಹಾಗಾಗಿಯೇ ಎಲ್ಲರೂ ಇದನ್ನ ಸದುಪಯೋಗ ಪಡೆಸಿಕೊಳ್ಳಿ ಎಂದು ಚುನಾವಣಾ ಆಯೋಗ ತಿಳಿಸಿದೆ.

ನಕಲಿ ಮತದಾರರಿಗೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗ ಹೀಗೆ ಮುಂದಾಗಿದೆ.ಸಾಲು ಸಾಲು ಚುನಾವಣೆಗಳು ಹತ್ತಿರ ಬರುತ್ತಿರುವ ಹಿನ್ನೆಲೆಯಿಂದ ಚುನಾವಣಾ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ಜೊತೆ ಹೊಸ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ.

ಹಲವು ಕಡೆ ನಕಲಿ ಮತದಾರರ ಪಟ್ಟಿ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಚುನಾವಣಾ ಆಯೋಗ ಮುಂದಾಗಿದೆ.ಇನ್ನು ಆಧಾರ್ ಕಾಡ್೯ ಲಿಂಕ್ ನಿಂದ ಎರಡು ಮೂರು ಕಡೆ ಮತದಾನ ಮಾಡುತ್ತಿದ್ದ ನಕಲಿ ಮತದಾರರ ಪತ್ತೆಗೆ ಬಿಬಿಎಂಪಿಯಿಂದ ಇದೀಗ ಮೆಗಾ ಪ್ಲಾನ್ ನಡೆಯುತ್ತಿದೆ.

Edited By : Manjunath H D
PublicNext

PublicNext

30/07/2022 12:13 pm

Cinque Terre

33.81 K

Cinque Terre

2

ಸಂಬಂಧಿತ ಸುದ್ದಿ