ರಿಪೋರ್ಟ್- ರಂಜಿತಾ ಸುನಿಲ್
ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ಬೆಂಗಳೂರು ವಿವಿ ಪ್ರದೇಶದ ದಲ್ಲಿರುವ ಸುಮಾರು 60 ಎಕರೆ ಜಾಗದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯಕ್ಕೆ ಭೇಟಿ ನೀಡಿದರು, ಈ ವಿದ್ಯಾಲಯವನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು 20ನೇ ತಾರೀಕು ಅನಾವರಣ ಮಾಡಲಿದ್ದಾರೆ, 12 ಅಡಿ ಎತ್ತರವಿರುವ ಡಾಕ್ಟರ್ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಿದ್ದಾರೆ.
ವಿದ್ಯಾಲಯದ ಒಳಗಡೆ ಪರಿಶೀಲನೆ ನಡೆಸಿದ ಉಭಯ ಸಚಿವರು, ರೈತರಿಗೆ ಅನುಕೂಲವಾಗುವ ತರವ ಕೆಲವೊಂದು ತಾಂತ್ರಿಕ ಉಪಕರಣಗಳನ್ನು ಐಟಿ ಸಚಿವರು ವೀಕ್ಷಿಸಿದರು. ವಸತಿ ಸಚಿವರು ಕೆಲ ತಾಂತ್ರಿಕ ಉಪಕರಣಗಳನ್ನು ಕಂಡು ಆಶ್ಚರ್ಯಕ್ಕೆ ಒಳಗಾದರು. ನಂತರ ಮಾತನಾಡಿದ ವಸತಿ ಸಚಿವ ವಿ ಸೋಮಣ್ಣ ಇತರ ಅನುಕೂಲವಿರುವ ವಿಶ್ವವಿದ್ಯಾಲಯವು ಐವತ್ತು ವರ್ಷದ ಹಿಂದೇನೇ ನಮಗೆ ಸಿಕ್ಕಿದ್ದರೆ ನಮ್ಮ ವಿದ್ಯಾರ್ಥಿಗಳು ಮತ್ತಷ್ಟು ಆರ್ಥಿಕವಾಗಿ ದೇಶವನ್ನು ಬೆಳೆಸುತ್ತಿದ್ದರು. ಬಾಬಾ ಸಾಹೇಬ್ ಅವರ ಹೆಸರಿನಲ್ಲಿ ಈ ವಿದ್ಯಾಲಯವನ್ನು ನಮ್ಮ ರಾಜ್ಯಕ್ಕೆ ಕೊಟ್ಟಂತಹ ದೇಶದ ಪ್ರಧಾನಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
Kshetra Samachara
17/06/2022 07:50 pm