ಬೆಂಗಳೂರು: ವಾರ್ಡ್‌ಗಳಲ್ಲಿನ ಪರಿಸ್ಥಿತಿಗಳ ಸುಧಾರಿಸಲು ಏನು ಮಾಡಬೇಕೆಂಬುದರ ಕುರಿತು ಚರ್ಚಿಸುವ ಸಲುವಾಗಿ ಏರ್ಪಡುವ ಬಿಬಿಎಂಪಿ ವಾರ್ಡ್ ಮಟ್ಟದ ಸಮಿತಿ ಸಭೆ ಮತ್ತಷ್ಟು ಚುರುಕು ಮುಟ್ಟಿಸಲು ಆಡಳಿತ ವರ್ಗ ಮುಂದಾಗಿದೆ. ಈ ಸಂಬಂಧ ಇಂದು ತಮ್ಮ ಕೆಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜನ ಪ್ರತಿನಿಧಿಗಳ ಅವಧಿಯು ದಿನಾಂಕ 10-09- 2020ರಂದು ಮುಕ್ತಾಯ ಗೊಂಡಿತ್ತು. ತದನಂತರ 21-09-2020ರಿಂದ ಎಲ್ಲಾ 198 ವಾರ್ಡ್ ಗಳ ವಾರ್ಡ್ ಸಮಿತಿಗೆ ಪಾಲಿಕೆಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿತ್ತು.
ಬಳಿಕ ಪಾಲಿಕೆಯ ವಾರ್ಡ್ ಸಭೆ ಬಹುತೇಕ ನಡೆದಿಲ್ಲ. ಕಳೆದೊಂದು ವರ್ಷದಿಂದ 11ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಸಮಿತಿ ಸಭೆಯೆ ನಡೆದಿಲ್ಲ. ಈ ಬಗ್ಗೆ ಜನಾಗ್ರಹ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು. ಆಡಳಿತದಲ್ಲಿ ಮತ್ತಷ್ಟು ಚುರುಕು ಗೊಳಿಸುವ ಸಲುವಾಗಿ ವಾರ್ಡ್ ಸಮಿತಿ ಸಭೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ವಾರ್ಡ್ ನಲ್ಲಿ ರಸ್ತೆ ಗುಂಡಿ ಮುಚ್ಚಲು, ಪಾದಚಾರಿ ಮಾರ್ಗ ಕೊಳವೆ ಬಾವಿ ತೆರೆಯಲು ಪ್ರತಿ ವಾರ್ಡ್ ಗೆ 60 ಲಕ್ಷ ಹಣವನ್ನು ಮೀಸಲಿಡಲಾಗುತ್ತದೆ.
ಇನ್ನು ಈ ಸೂಚನೆಯನ್ನು ಉಲ್ಲಂಘಿಸುವ ನೋಡಲ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಹ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಅವರು ನೀಡಿದ್ದಾರೆ.
Kshetra Samachara
16/05/2022 10:04 pm