ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಟ್ ರೀಚೆಬಲ್ ಕಮಿಷನರ್ ಗೌರವ್ ಗುಪ್ತ ಎತ್ತಂಗಡಿಗೆ ಆ ಲೆಟರ್ ಕಾರಣವೇ...?

ಎಕ್ಸ್ ಕ್ಲೂಸಿವ್ ವರದಿ- ಗಣೇಶ್ ಹೆಗಡೆ

ಬೆಂಗಳೂರು- ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಆಯುಕ್ತರು/ಮುಖ್ಯ ಆಯುಕ್ತರು/ಆಡಳಿತಾಧಿಕಾರಿಗಳ ಇತಿಹಾಸದಲ್ಲಿ “ನಾಟ್ ರೀಚಬಲ್” ಐಎಎಸ್ ಎಂದೇ ಕರೆಯಿಸಿಕೊಂಡಿದ್ದ ಗೌರವ್ ಗುಪ್ತಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ನಿರ್ಗಮಿಸಿದ್ದಾರೆ.ಅಂದ್ಹಾಗೆ ಸರ್ಕಾರ ಗೌರವ್ ಗುಪ್ತಾ ಅವರನ್ನು ವರ್ಗ ಮಾಡೊಕ್ಕೆ ಕಾರಣವಾದ ಸಂಗತಿಗಳಲ್ಲಿ ಆ ಒಂದು ಪತ್ರವೂ ಕೂಡ ಪ್ರಮುಖ ರೀಸನ್ ಆಗಿತ್ತಾ ಎನ್ನುವ ಪ್ರಶ್ನೆ ಮೂಡುತ್ತಿದೆ.

ಹೌದು…ಇದು ಕಾಕತಾಳೀಯವೋ ಅಥವಾ ಸತ್ಯವೋ ಗೊತ್ತಿಲ್ಲ.ಆದರೆ ಸಾಮಾಜಿಕ ಕಾರ್ಯಕರ್ತರೊಬ್ಬರು ಸರಕಾರಕ್ಕೆ ಬರೆದ ಪತ್ರದ ಎಫೆಕ್ಟ್ ಕೂಡ ಗೌರವ್ ಗುಪ್ತಾ ವರ್ಗಾವಣೆ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದಂತೂ ಸತ್ಯ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ..ಅಂದ್ಹಾಗೆ ಸರ್ಕಾರಕ್ಕೆ ಗೌರವ್ ಗುಪ್ತಾ ವಿರುದ್ದ ಪತ್ರ ಬರೆದು ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ,ಅಕ್ಷರಶಃ ಅವರನ್ನು ಅಸಮರ್ಥ ಕಮಿಷನರ್ ಎಂದೇ ವ್ಯಾಖ್ಯಾನಿಸಿದ್ದರು ಸಾಯಿದತ್ತರವರು.

ಸಾರ್ವಜನಿಕರ ನಡುವಿದ್ದು ಅವರ ಸಮಸ್ಯೆ-ಅಹವಾಲು ಕೇಳಬೇಕಿದ್ದ ಗೌರವ್ ಗುಪ್ತಾ ಅವರಂಥ ಅಧಿಕಾರಿಯನ್ನು ಬಿಬಿಎಂಪಿಯ ಆಯಕಟ್ಟಿನ ಹುದ್ದೆನೆ ನಿಯೋಜಿಸಿದಾಗಲೇ ಸಾರ್ವಜನಿಕವಾಗಿ ಸಾಕಷ್ಟು ಆಕ್ಷೇಪ ಕೇಳಿಬಂದಿತ್ತು.ಆದರೆ ಪ್ರಭಾವಿ ಸಚಿವರೊಬ್ಬರ ಕೃಪಕಟಾಕ್ಷದಿಂದ ಮೊದಲು ಆಡಳಿತಾಧಿಕಾರಿ ನಂತರ ಮುಖ್ಯ ಆಯುಕ್ತರಾಗಿ ನೇಮಕಗೊಂಡ ಆಪಾದನೆ ಗೌರವ್ ಗುಪ್ತಾ ಮೇಲಿದೆ.

ಅಧಿಕಾರ ವಹಿಸಿಕೊಂಡ ಮೇಲೆ ಎದುರಾದ ಸಾಲು ಸಾಲು ಸಮಸ್ಯೆ-ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಪ್ರತಿ ಹಂತಗಳಲ್ಲೂ ವಿಫಲವಾದ ಕಳಂಕ ಗೌರವ್ ಗುಪ್ತಾ ಮೇಲಿದೆ.ಆದರೂ ಸರ್ಕಾರದ ಸಚಿವರುಗಳ ಶ್ರೀರಕ್ಷೆಯಿಂದಾಗಿ ಪ್ರತಿ ಬಾರಿಯೂ ಅಪಾಯದಿಂದ ಪಾರಾಗುತ್ತಾ ಬಂದಿದ್ದರು.ಆದರೆ ಯಾವತ್ತಾದ್ರೂ ಒಂದು ದಿನ ಅದರ ಎಫೆಕ್ಟ್ ಅವರ ವೃತ್ತಿ ಮೇಲೆ ಆಗುತ್ತೆ ಎನ್ನುವ ನಂಬಿಕೆ-ವಿಶ್ವಾಸವಿಟ್ಟುಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅನೇಕ ಸಂದರ್ಭಗಳಲ್ಲಿ ಸರ್ಕಾರದ ಮಟ್ಟದಲ್ಲಿ ಪತ್ರ ಬರೆದು ಗೌರವ್ ಗುಪ್ತಾ ಅವರ ಕಾರ್ಯವೈಖರಿಯ ಬಗ್ಗೆ ಆಕ್ಷೇಪ-ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು.

Edited By : Nagaraj Tulugeri
Kshetra Samachara

Kshetra Samachara

06/05/2022 12:46 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ