ಬೆಂಗಳೂರು: ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಆಟೊಮೆಟಿಕ್ ನಂಬರ್ ಪ್ಲೇಟ್ ರೆಕಗ್ನೇಷನ್ ಕ್ಯಾಮರಾ (ಎಎನ್ ಪಿಆರ್) ಬಳಕೆಗೆ ಮುಂದಾಗಿದೆ ಸಂಚಾರ ಇಲಾಖೆ.
ಕೆಲ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಎಎನ್‌ಪಿಆರ್ ಕ್ಯಾಮರಾ ನೀಡಿರೋ ಇಲಾಖೆ,ಸಂಚಾರಿ ನಿಯಮ ಉಲ್ಲಂಘನೆ,ನಕಲಿ ನಂಬರ್ ಪ್ಲೇಟ್ ಹಾವಳಿ ತಪ್ಪಿಸಲು ಹಾಗೂ ಕಳ್ಳತನ ವಾಹನಗಳ ಬಗ್ಗೆ ಸುಲಭವಾಗಿ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಲು ಈ ಸಾಧನ ಉಪಕಾರಿಯಾಗಿದೆ. ಈ ಕ್ಯಾಮರಾ ನಿರ್ದಿಷ್ಟ ಜಾಗದಲ್ಲಿ ಅಳವಡಿಸಬೇಕೆಂದಿಲ್ಲ. ಎಲ್ಲೆಂದರಲ್ಲಿ ತೆಗೆದುಕೊಂಡು ಸ್ಟ್ಯಾಂಡ್ ಹಾಕಿ ಕಾರ್ಯಾಚರಣೆ ನಡೆಸಬಹುದಾಗಿದೆ. ಪ್ರಾಥಮಿಕ ಹಂತದಲ್ಲಿ ಈಗಾಗಲೇ 20 ಕ್ಯಾಮರಗಳು ನಗರದಲ್ಲಿ ಬಳಕೆಯಾಗುತ್ತೆ.
ನಂಬರ್ ಪ್ಲೇಟ್ ಸೆರೆಹಿಡಿದರೆ ನಾಲ್ಕಕ್ಕಿಂತ ಹೆಚ್ಚು ಸಂಚಾರಿ ನಿಯಮ ಉಲ್ಲಂಘಿಸುವುದು ಕಂಡು ಬಂದರೆ ಕೂಡಲೇ ಕ್ಯಾಮರಾ ನೆರವಿನಿಂದ ಪತ್ತೆ ಹಚ್ಚಿ ಪೊಲೀಸರು ಡೌನ್‌ಲೋಡ್ ಮಾಡಿಕೊಂಡಿರುವ ಎಎನ್ ಪಿಆರ್ ಮೊಬೈಲ್ ಆ್ಯಪ್ ಗೆ ಕೆಲವೇ ಕ್ಷಣಗಳಲ್ಲಿ ಸಂದೇಶ ಬರಲಿದೆ. ಸಾಮಾನ್ಯವಾಗಿ ಸಂಚಾರಿ ನಿಯಮ ಉಲ್ಲಂಘಿಸಿದರೆ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ (ಟಿಎಂಸಿ) ನಲ್ಲಿರುವ ಸರ್ವರ್ ನಲ್ಲಿ ದಾಖಲಾಗುತ್ತದೆ.
ಹಿಂದಿನ ಸಿಗ್ನಲ್ ನಲ್ಲಿ ವೈಲೇಷನ್ ಕಂಡು ಬಂದ್ರೆ ಮುಂದಿನ ಸಿಗ್ನಲ್ ಗೆ ಈ ಮಾಹಿತಿ ರವಾನೆಯಗುತ್ತದೆ. ಮಾಹಿತಿ ಆಧರಿಸಿ ಮುಂದಿನ ಸಿಗ್ನಲ್ ನಲ್ಲಿ ವೆಹಿಕಲ್ ಅಡ್ಡಗಟ್ಟಿ ಸಂಚಾರ ಪೊಲೀಸ್ರು ವಾಹನ ತಪಾಸಣೆ ನಡೆಸಲು ಈ ಸಾಧನ ಸಹಕಾರಿಯಾಗಿದೆ.
Kshetra Samachara
10/03/2022 11:07 am