ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಮನೆಗೆ ಬರ್ತಾರೆ ಡಾಕ್ಟರ್‌-ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಪ್ಲಾನ್

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿವೆ. ದಿನವೂ ಇಲ್ಲಿಯ ಕೋವಿಡ್ ಕೇಸ್ ಲೆಕ್ಕಚಾರವೇ ಬುಡವೇಲಾಗುತ್ತಿದೆ. ಲೆಕ್ಕ ಮೀರಿ ಕೇಸ್ ದಾಖಲಾಗುತ್ತಿವೆ. ಅದಕ್ಕೇನೆ ಬಿಬಿಎಂಪಿ ಹೊಸ ಮಾಸ್ಟರ್ ಪ್ಲಾನ್ ಮಾಡಿದೆ. ಅದೇನೂ ಅಂತ ಹೇಳ್ತೀವಿ ಬನ್ನಿ.

ಬಿಬಿಎಂಪಿ ಕೋವಿಡ್ ಸೋಂಕನ್ನ ತಡೆಯಲು ಹೊಸ ತಂಡವನ್ನೆ ರಚಿಸಿದೆ. ಇದನ್ನ ಫಿಜಿಕಲ್ ಟ್ರಯಾಜಿಂಗ್ ಟೀಮ್ ಅಂತಲೇ ಕರೆಯಲಾಗುತ್ತಿದೆ.

ಈ ತಂಡ ಫಿಜಿಕಲ್ ಆಗಿಯೇ ಕೊರೊನಾ ಸೋಂಕಿತರ ಮನೆಗೆ ಹೋಗುತ್ತದೆ. ಅಲ್ಲಿರೋ ರೋಗಿಗಳಿಗೆ ಸೂಕ್ತ ಸಲಹೆಗಳನ್ನೂ ಕೊಡುತ್ತದೆ. ಅವಶ್ಯಕತೆಯಿದ್ದರೆ ಅವರನ್ನ ಆಸ್ಪತ್ರೆಗೂ ದಾಖಲಿಸುತ್ತದೆ.

ಹೀಗೆ ಕೆಲಸ ಮಾಡುವ ಫಿಜಿಲ್ ಟ್ರಾಯಾಜಿಂಗ್ ಟೀಮ್ ಕೋವಿಡ್ ನಿಯಂತ್ರಣಕ್ಕೆ ಮುಂದಾಗುತ್ತಿದೆ. ಬಿಬಿಎಂಪಿ ಈ ಪ್ಲಾನ್ ಗಾಗಿಯೇ ತಂಡವನ್ನೂ ರಚಿಸಿದೆ.

Edited By :
Kshetra Samachara

Kshetra Samachara

23/01/2022 10:30 pm

Cinque Terre

898

Cinque Terre

0

ಸಂಬಂಧಿತ ಸುದ್ದಿ