ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಂತಕುಮಾರ್ ಪ್ರತಿಷ್ಠಾನಕ್ಕೆ ಭೂಮಿ ಮಂಜೂರು‌ ಮಾಡಿದ ಸರ್ಕಾರ!

ರಿಪೋರ್ಟ್- ರಂಜಿತಾಸುನಿಲ್

ಬೆಂಗಳೂರು: ಅನಂತಕುಮಾರ್ ಜನ್ಮದಿನದ ಅಂಗವಾಗಿ ಅವರ ಸ್ಮರಣಾರ್ಥ ಸಾಮಾಜಿಕ ಸೇವಾಕಾರ್ಯಗಳಿಗಾಗಿ ಅನಂತಕುಮಾರ್ ಪ್ರತಿಷ್ಠಾನಕ್ಕೆ 3 ಎಕರೆ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅನಂತಕುಮಾರ್ ಅವರ ಜನ್ಮಸ್ಥಳವಾದ ಹೆಗ್ಗನಹಳ್ಳಿಯಲ್ಲಿರುವ ಜಮೀನನ್ನು ಪ್ರತಿಷ್ಠಾನಕ್ಕೆ ನೀಡಿರುವ ವಿಷಯವನ್ನು ಜಲಸಂಪನ್ಮೂಲ ಖಾತೆ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರು ಅನಂತಪಥ ಮಾಸಪತ್ರಿಕೆಯ ೨೫ನೇ ಸಂಚಿಕೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ತಿಳಿಸಿದರು.

ಶ್ರೀ ಅನಂತಕುಮಾರರು ಪ್ರತಿಪಾದಿಸಿದ ಸಸ್ಯಾಗ್ರಹ ಮತ್ತು ಹಸಿರು ಜೀವನ ಶೈಲಿಯ ಅನುಷ್ಠಾನ ಮತ್ತಿತರ ಚಟುವಟಿಕೆಗಳಿಗಾಗಿ ಅನಂತಕುಮಾರ್ ಪ್ರತಿಷ್ಠಾನವು ಈ ಭೂಮಿಯನ್ನು ಬಳಸಿಕೊಳ್ಳಲಿದೆ. ರಾಜ್ಯಸರ್ಕಾರದ ಈ ಕೊಡುಗೆಗಾಗಿ ಅನಂತಕುಮಾರ್ ಪ್ರತಿಷ್ಠಾನದ ಪರವಾಗಿ ಡಾ. ತೇಜಸ್ವಿನಿ ಅನಂತಕುಮಾರ್ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೂ, ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್ ಅವರಿಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಅನಂತಕುಮಾರರ ವ್ಯಕ್ತಿತ್ವ-ಕರ್ತೃತ್ವ- ನೇತೃತ್ವಗಳನ್ನು ಹೊಸ ಪೀಳಿಗೆಗೆ ಪರಿಚಯಿಸಿ ನಾಯಕತ್ವ ತರಬೇತಿ ನೀಡುವ ನಿಟ್ಟಿನಲ್ಲಿ ಈ ಕೊಡುಗೆ ಸಾರ್ಥಕವಾಗುವುದೆಂಬ ಆಶಯವನ್ನು ಅಧ್ಯಕ್ಷರಾದ ಡಾ. ಪಿ.ವಿ. ಕೃಷ್ಣಭಟ್ಟರು ವ್ಯಕ್ತಪಡಿಸಿದರು. ಪ್ರತಿಷ್ಠಾನದ ಸದಸ್ಯ ಶ್ರೀ ಪ್ರದೀಪ್ ಓಕ್, ಗ್ರಾಮೀಣ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುಕಾಂತ ಚಟಪಲ್ಲಿ. ಅನಂತಪಥ ಪತ್ರಿಕೆಯ ಸಂಪಾದಕ ಶ್ರೀ ಟಿ.ಎಸ್. ಗೋಪಾಲ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

22/07/2022 09:00 pm

Cinque Terre

1.78 K

Cinque Terre

1

ಸಂಬಂಧಿತ ಸುದ್ದಿ