ಬಿಬಿಎಂಪಿಯ ಬಿಎಂಟಿಎಫ್ ಅಧಿಕಾರಿ ಮೇಲೆ ಎಸಿಬಿ ದಾಳಿ ಆಗಿದೆ. ಮಾಜಿ ಕಾರ್ಪೊರೇಟರ್ ಬಳಿಯೇ ಲಂಚ ಪಡೆಯೋ ವೇಳೆ ರೆಡ್ ಹ್ಯಾಂಡ್ ಆಗಿಯೇ ಸಿಕ್ಕಿಬಿದ್ದಿದ್ದಾರೆ ಪಿಎಸ್ಐ ಬೇಬಿ ಓಲೆಕಾರ್.
ಹೌದು. ಹೊರ ಮಾವು ಅಗರ ಸರ್ವೆ ನಂಬರ್ 153ರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಬೇಬಿ ಓಲೇಕಾರ್ 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಹಣದಲ್ಲಿ ಒಂದು ಲಕ್ಷ ಪಡೆಯೋವಾಗಲೇ ಎಸಿಬಿಗೆ ಪಿಎಸ್‌ಐ ಬೇಬಿ ಓಲೇಕಾರ್ ಸಿಕ್ಕಿಬಿದಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ್ ದೂರು ಕೊಟ್ಟಿದ್ದರು. ಅದರ ಆಧಾರದ ಮೇಲೇನೆ ಈ ಎಸಿಬಿ ದಾಳಿ ಆಗಿದೆ.
PublicNext
07/07/2022 04:30 pm