ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದಿನ್ನೂರು ಗ್ರಾಮದಲ್ಲಿ ಹೈಡ್ರಾಮವೇ ನಡೆದಿದೆ. ದಿನ್ನೂರಿನ ಮುನಿದೊಡ್ಡಪ್ಪ ಮಕ್ಕಳಿಂದ ಸರ್ಕಾರಿ ಗ್ರಾಮ ಠಾಣಾ 22 ಗುಂಟೆ ಒತ್ತುವರಿಯಾಗಿತ್ತು.
ಗ್ರಾಮಠಾಣಾ ಉಳಿವಿಗೆ ಮುನಿಯಪ್ಪ ಎಂಬವರು ಭೂ ಕಬಳಿಕೆ ನ್ಯಾಯಾಲಯದಲ್ಲಿ ದಾವೆ ಹಾಕಲಾಗಿತ್ತು. ಈ ಹಿನ್ನೆಲೆ ಒತ್ತುವರಿ ತೆರವು ಮಾಡಿ ಪಂಚಾಯ್ತಿ ಆಸ್ತಿ ವಶಕ್ಕೆ ಪಡೆಯುವಂತೆ ನ್ಯಾಯಾಲಯ ಆದೇಶಿಸಿತ್ತು.
ಚನ್ನರಾಯಪಟ್ಟಣ ಗ್ರಾಮ ಪಂಚಾಯ್ತಿಯಿಂದ ಒತ್ತುವರಿ ಜಾಗದ ತೆರವು ಕಾರ್ಯಾಚರಣೆ ಜೆಸಿಬಿ ಮುಖಾಂತರ ನಡೆಯಿತು.
ಈ ವೇಳೆ ಒತ್ತುವರಿದಾರರು ಕೆಲಸಕ್ಕೆ ಅಡ್ಡಿ ಪಡಿಸಿ ಗಲಾಟೆ ಎಬ್ಬಿಸಿದರು. ದೂರುದಾರನ ಕುಟುಂಬದ ಮೇಲೆ ಮುಗಿಬಿದ್ದು ಹಲ್ಲೆಗೆ ಯತ್ನಿಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ನೂಕಾಟ ತಳ್ಳಾಟವೇ ನಡೆಯಿತು. ಪಂಚಾಯ್ತಿ ಅಧ್ಯಕ್ಷರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಒತ್ತುವರಿದಾರರು ಹಾಗೂ ದೂರುದಾರರು ಪರಸ್ಪರ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ದೇವನಹಳ್ಳಿ
PublicNext
25/06/2022 07:03 pm