ಸರ್ಕಾರದ ಸಾಧನ ಸೌಲಭ್ಯ ಕಟ್ಟಕಡೆ ಪ್ರಜೆಗೂ ತಲುಪಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿನಡೆ ಹಳ್ಳಿಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೆ ಮೊದಲು ಎಂಬಂತೆ "ಕಾನೂನು ನಡೆ ಹಳ್ಳಿ ಕಡೆ" ಎಂಬ ವಿನೂತನ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಮುಂದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ- ಸದಸ್ಯರಾದ ಸಂದೀಪ್ ಸಾಲಿಯಾನ ರವರ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸೇವೆಗಳ ಪ್ರಾಧಿಕಾರ ಜನಸೇವೆಗೆ ಮುಂದಾಗಿದೆ. ಇವರ ಸದುದ್ದೇಶದ ಜೊತೆಗೆ ಹೊಸಕೋಟೆ ತಾಲೂಕು ವಕೀಲರ ಸಂಘ, ಹೊಸಕೋಟೆ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕೈಜೋಡಿಸಿವೆ. ಹೊಸಕೋಟೆ ತಾಲೂಕಿನ ಮುಗಳೀಪುರದಲ್ಲಿಂದು "ಕಾನೂನುನಡೆ ಹಳ್ಳಿಕಡೆ" ಕಾರ್ಯಕ್ರಮ ನಡೆಯಿತು. ಸ್ಥಳದಲ್ಲೆ ಗ್ರಾಮದ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಎಲ್ಲಾ ಇಲಾಖೆ ಮುಂದಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಗಳೀಪುರದಲ್ಲಿ ಇಂದು ಕಾರ್ಯಕ್ರಮ ನಡೆಯಿತು. ಗ್ರಾಮವನ್ನು ಹೆಚ್ಚಾಗಿ ಕಾಡ್ತಿರುವ ಸ್ಮಶಾನ, ರಸ್ತೆ, ಶಾಲೆಗೆ ವಿದ್ಯುತ್ ಸಮಸ್ಯೆ ಸೇರಿ ಇತರೆ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ದೊರೆಯಿತು. ಈ ಬಗ್ಗೆ ವಕೀಲರು ಮತ್ತು ಗ್ರಾಮಸ್ಥರು ಸಂತೋಷ ಗೊಂಡಿದ್ದಾರೆ.
ನಾನು ನನ್ನದು ಎನ್ನುವ ಬದಲಿಗೆ ನಾವು ನಮ್ಮದು ಎಂಬ ಸೇವಾ ಮನೋಭಾವ ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತದೆ. ಕಾನೂನಿನಡಿ ಹಕ್ಕುಗಳನ್ನು ಬಯಸುವ ಮನುಷ್ಯ ಕರ್ತವ್ಯ ನಿಷ್ಟೆ ಪಾಲಿಸಿದರೆ ಸಮಾಜದ ಉದ್ಧಾರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಪ್ರಜೆಗೂ ಕಾನೂನು ಅರಿವು ಉಂಟಾದರೆ ಉತ್ತಮ ಸಮಾಜ ಮನಿರ್ಮಾಣ ಸಾಧ್ಯ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
04/08/2022 01:56 pm