ಕೆಂಗೇರಿ : ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವ ಗಾದೆಗೆ ಈ ಸ್ಟೋರಿ ಸರಿಯಾಗಿಯೇ ಸೂಟ್ ಆಗುತ್ತೆ.
ಅಡ್ಡ-ದಿಡ್ಡಿ ಹೊಗ್ತಿರುವ ವಾಹಾನಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ, ಸಿಗ್ನಲ್ ಗಳು ವರ್ಕ್ ಆಗುತ್ತಿದಿಯಾ ಗೊತ್ತಿಲ್ಲ, ಇದ್ರಿಂದ ಪಾದಾಚಾರಿಗಳಿಗೆ, ಕರೆಕ್ಟ್ ಆಗಿ ರೂಲ್ಸ್ ಫಾಲೋ ಮಾಡೋ, ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಇರೋ ರಸ್ತೆ ಇರೋದು ನಮ್ಮ ಕೆಂಗೇರಿಯ ಮೈಸೂರ ರಸ್ತೆ.
ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿರುವ ವಾಹನ ಸವಾರರು ಒಂದು ಕಡೆಯಾದ್ರೆ, ಹೇಗಪ್ಪ ರಸ್ತೆ ದಾಟೋದು ಅಂತ ಭಯದಲ್ಲೇ ರಸ್ತೆ ದಾಟುತ್ತಿರುವ ಪಾದಚಾರಿಗಳು ಮತ್ತೊಂದು ಕಡೆ.
ಇದನ್ನೇಲ್ಲಾ ನೋಡ್ತಿದ್ರೆ, ಒಂದು ಪ್ರಶ್ನೆಯಂತು ಕಾಡತ್ತೆ, ಇಲ್ಲಿ ಟ್ರಾಫಿಕ್ ಪೊಲೀಸರು ಇಲ್ವಾ ಅಂತ..? ಆದರೆ ಇಲ್ಲಿ ಪೊಲೀಸರು ಇದ್ದಾರೆ ರೂಲ್ಸ್ ಬ್ರೇಕ್ ಮಾಡುವ ವಾಹನಗಳ ಪೋಟೋ ತೆಗೆದುಕೊಂಡ ತೆಪ್ಪಗಾಗುತ್ತಿದ್ದಾರೆ.
ಇಲ್ಲಿರುವ ಸಿಗ್ನಲ್ ಗಳು ಮತ್ತು ಸಿಸಿ ಕ್ಯಾಮೆರಾಗಳು ಅದು ಯಾವ್ ಸಮಯದಲ್ಲಿ ವರ್ಕ್ ಮಾಡುತ್ತೊ ಗೊತ್ತಿಲ್ಲ, ಯಾವ್ದೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ದೆ, ಮನಸ್ಸಿಗೆ ಬಂದ ಹಾಗೆ ವಾಹನ ಚಲಾಯಿಸುವ ವಾಹನ ಸವಾರರಿಗೆ ಅದು ಯಾವಾಗ ಬುದ್ಧಿಬರುತ್ತೊ ದೇವರೇ ಬಲ್ಲ.
ಸದ್ಯ ಈ ರಸ್ತೆಯಲ್ಲಿ ಸುಮಾರು ಆಕ್ಸಿಡೆಂಟ್ ಗಳು ಸಂಭವಿಸಿವೆ, ಜೀಬ್ರಾ ಕ್ರಾಸಿಂಗ್ ಇದ್ರೂ ಯಾರು ಯೂಸ್ ಮಾಡ್ತಿಲ್ಲ.. ಯಾಕಂದ್ರೆ,ಅಷ್ಟರಲ್ಲೆ ವಾಹನಗಳು ನುಗ್ಗುತ್ತಿರುತ್ತವೆ..
ಮೈಸೂರ ರಸ್ತೆ ಪರಿಸ್ಥಿತಿನೇ ಹಿಂಗಾದ್ರೆ, ಇನ್ನ ಲೋಕಲ್ ರಸ್ತೆ ಅಥವಾ ಗಲ್ಲಿ ರಸ್ತೆಗಳ ಕಥೆ ಕೇಳಂಗಿಲ್ಲ.
ಈಗ್ಲು ಹೆಲ್ಮೆಟ್ ಧರಿಸದೆ, ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ದೆ ಇರೋರಿಗೆ ಅದು ಯಾವಾಗ ಬುದ್ಧಿ ಬರುತ್ತೊ ಕಾದು ನೋಡಬೇಕಿದೆ.
ರಂಜಿತ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
23/03/2022 07:57 pm