ಯಲಹಂಕ: ಕಮಾನ್ ಮ್ಯಾನ್, ಈ ಕಡೆ ಹಾಕು, ಡೋಂಟ್ ವರಿ, 50ರ ಪ್ರಾಯದ ಸೀನಿಯರ್ಸ್ ಮಾಡ್ತಿರುವ ಮೈಜುಮ್ಮೆನ್ನೊ ಯೋಗ, ಚೆಸ್ ಇವೆಲ್ಲಾ ನೋಡ್ತಿದ್ದರೆ ನಮ್ಮ ಬಾಲ್ಯದ ಸ್ಕೂಲ್ ಸ್ಪೋರ್ಟ್ಸ್ ಕಾಂಪಿಟೇಶನ್ಸ್ ನೆನಪಾಗೋದು ಗ್ಯಾರಂಟಿ. ಆದರೆ ಆಟ ಆಡ್ತಿರೋರು ವಿದ್ಯಾರ್ಥಿಗಳಲ್ಲ. ಬದಲಿಗೆ ಶಾಲಾ ಮಕ್ಕಳ ಪೋಷಕರು.
ಹೌದು. ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಖೇಲೋತ್ಸವ ಆಚರಿಸ್ತಿದೆ. ಇದರ ಭಾಗವಾಗಿ ಯಲಹಂಕದ ರಾಜಾನುಕುಂಟೆ ಬಳಿಯ ವಿಶ್ವವಿದ್ಯಾಪೀಠ ಶಾಲೆ ಪೋಷಕರ ಖೇಲೋತ್ಸವ 2022ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕ್ರೀಡಾಕೂಟದಲ್ಲಿ ರಾಜ್ಯ, ದೇಶ ವಿದೇಶಗಳಲ್ಲಿ ಭಾಗವಹಿಸಿದ್ದ ಅಥ್ಲೆಟ್‌ಗಳಾಗಿದ್ದ 750ಕ್ಕೂ ಹೆಚ್ಚು ಜನ ಪೋಷಕರು ಭಾಗವಹಿಸಿದ್ದು ಖೇಲೋತ್ಸವದ ವಿಶೇಷ.
ಖೇಲೋತ್ಸವ ಎರಡು ದಿನಗಳಿಂದ ರಾಜಾನುಕುಂಟೆಯ ವಿಶ್ವವಿದ್ಯಾಪೀಠ ಶಾಲೆಯಲ್ಲಿ ನಡೆಯುತ್ತಿದೆ. ಶನಿವಾರ ಟ್ರಯಲ್ಸ್ ನಡೆದರೆ, ಭಾನುವಾರ (ನಿನ್ನೆ) ಫೈನಲ್ಸ್ ನಡೆಯಿತು. ಪೋಷಕರು ಪುಟ್ಬಾಲ್, ಬ್ಯಾಡ್ಮಿಂಟನ್, ಥ್ರೋಬಾಲ್, ಚೆಸ್, ಕೇರಂ, ಜಂಪ್ರೋಲ್ ಮತ್ತು ಯೋಗ ಕ್ರೀಡೆ ನೆರೆದಿದ್ದ, ಆಡಿದ, ಆಡಿಸಿದ ಎಲ್ಲರನ್ನು ರಂಜಿಸಿದವು. ಕ್ರೀಡಾಕೂಟ ಆಯೋಜನೆ ಬಗ್ಗೆ ಪೋಷಕರು ಮತ್ತು ಶಾಲೆ ಧನ್ಯವಾದ ಅರ್ಪಿಸಿದೆ.
ಕೇಂದ್ರ ಸರ್ಕಾರ ಉದ್ದೇಶಿಸಿದ್ದ ಖೇಲೋತ್ಸವ ಯಲಹಂಕದಲ್ಲಿ ಸಾಕಾರಗೊಂಡಿದ್ದ ಪೋಷಕರಿಗೆ ಸಮಾಧಾನ ತಂದಿದೆ.
PublicNext
18/07/2022 12:30 pm