ವರದಿ ಪ್ರವೀಣ್ ನಾರಾಯಣ ರಾವ್
ಬೆಂಗಳೂರು: ಬಸವನಗುಡಿಯ ಸುಪ್ರಸಿದ್ಧ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ 54 ನೇ ವರ್ಷದ ಗಣೇಶೋತ್ಸವ ಅತ್ಯಂತ ಅದ್ದೂರಿ ಹಾಗೂ ಶ್ರದ್ಧಾಭಕ್ತಿಗಳಿಂದ ನಡೆಯುತ್ತಿದೆ.
ಎಂಟನೆಯ ದಿನದ ಕಾರ್ಯಕ್ರಮದ ಅಂಗವಾಗಿ ಇಂದು ಮಹಾಗಣಪತಿಗೆ ಸಹಸ್ರಮೋದಕ ಹವನ, ಬಗೆಬಗೆಯ ಭಕ್ಷ್ಯಗಳ ನೈವೇದ್ಯ ಮಹಾಪೂಜೆ ಅರ್ಪಿಸಲಾಯಿತು. ಮಹರ್ಷಿ ಡಾ ಆನಂದ ಗುರೂಜಿ, ಬೆಜ್ಜವಳ್ಳಿಯ ವಿಶ್ವಸಂತೋಷ ಭಾರತೀ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹವನ ಪೂಜೆಯಲ್ಲಿ ಪಾಲ್ಗೊಂಡು ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿದರು.. ಮಹಾಪೂಜೆಯ ನಂತರ ಅನ್ನದಾನ ನೆರವೇರಿತು.. ಕನ್ನಡತಿಂಡಿ ಕೇಂದ್ರದ ಡಾ ಕೃ.ವೆಂ ರಾಮಚಂದ್ರ ಹಾಗೂ ಅಶ್ವಥ್ ನಾರಾಯಣ ಸಹೋದರರು ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡು ಯಶಸ್ವಿಗೊಳಿಸಿದರು.
PublicNext
07/09/2022 08:16 pm