ಬೆಂಗಳೂರು: ಸಿಲ್ಕ್ ಬೋರ್ಡ್ ಜಂಕ್ಷನ್ ಅಂದ್ರೆ ಸಾಕು ಜನರು ಟ್ರಾಫಿಕ್ ಮತ್ತು ಧೂಳಿನಿಂದ ಬೇಜಾರಾಗಿ ಹೋಗಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ನೀವು ಬಂದು ನಿಂತಾಗ ನಿಮಗೆ ತಂಪಾದ ಗಾಳಿ ಮತ್ತು ಒಳ್ಳೆಯ ಆಕ್ಸಿಜನ್ ಸಿಗಲು ಕರ್ನಾಟಕ ಪೊಲೀಸ್ ಪಡೆ ಶ್ರಮಿಸುತ್ತಿದೆ. ಹೌದು.. ಬೆಂಗಳೂರಿನ ಸಿಲ್ಕ್ ಬೋರ್ಡ್‌ನ ಪಕ್ಕದಲ್ಲೇ ಇರುವಂತಹ ಕೆಎಸ್ಆರ್‌ಪಿ ಜಾಗದಲ್ಲಿ 5000 ಮರಗಳನ್ನು ನೆಡಲು ಪೊಲೀಸರು ಮುಂದಾಗಿದ್ದಾರೆ. ಮೊದಲೇ ಈ ರಸ್ತೆಯ ಮೇಲೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯ ದೂಳಿನಿಂದ ದಿನವೂ ಸಂಚರಿಸುವಂತಹ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಸ್ಥಳದಿಂದ ನಮ್ಮ ಪ್ರತಿನಿಧಿ ನವೀನ್ ನೀಡಿರುವ ವರದಿ ಒಮ್ಮೆ ನೋಡೋಣ ಬನ್ನಿ.
PublicNext
26/05/2022 06:50 pm