ದೊಡ್ಡಬಳ್ಳಾಪುರ: ಮಧ್ಯಾಹ್ನ 1 ಗಂಟೆಗೆ SSLC ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶದಿಂದ ಧೃತಿಗೆಡುವ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ತುಂಬಲು ನಗರದ ಯುವ ಸಂಚಲನ ತಂಡ ಸೈಕಲ್ ಜಾಥಾ ನಡೆಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದೆ.
ಯುವ ಸಂಚಲನ ತಂಡವು ಕಳೆದ 9 ವರ್ಷಗಳಿಂದ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೋಷಕರಲ್ಲಿ ಫಲಿತಾಂಶದ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತಾ ಬಂದಿದೆ. ನಗರದಲ್ಲಿ ಸೈಕಲ್ ಜಾಥಾ ಮಾಡುವ ಮೂಲಕ ಕಡಿಮೆ ಅಂಕದಿಂದ ಬೇಸರಗೊಂಡ ವಿದ್ಯಾರ್ಥಿಗಳು ಮತ್ತು ಅನುತೀರ್ಣಗೊಂಡ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ, ಇದರ ಜೊತೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿಯನ್ನ ನೀಡುವ ಮೂಲಕ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುತ್ತಿದೆ.
ನಿಮ್ಮ ಮಕ್ಕಳ ಜೀವನ ನಿಮ್ಮ ಕೈಯಲ್ಲಿದೆ ಅವರ ಮೇಲೆ ಒತ್ತಡವೇರಿ ಭಯ ಬೀಳಿಸದಿರಿ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಮನೆಯ ಸುತ್ತಮುತ್ತಲಿನ ಬಂಧು- ಮಿತ್ರರು ಫೇಲ್ ಆದ ವಿದ್ಯಾರ್ಥಿಗಳನ್ನು ಅಪಹಾಸ್ಯ ಮಾಡದೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಎಂಬ ಭಿತ್ತಿಪತ್ರಗಳನ್ನ ಹಿಡಿದು ಸೈಕಲ್ ಜಾಥಾ ನಡೆಸುವ ಮೂಲಕ ಯುವ ಸಂಚಲನ ಮಾದರಿ ಕೆಲಸ ಮಾಡುತ್ತಿದೆ.
PublicNext
19/05/2022 09:37 am