ವರದಿ - ಗಣೇಶ್ ಹೆಗಡೆ
ಬೆಂಗಳೂರು:ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅವಧಿಗೂ ಮುಂಚಿತವಾಗಿ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಇದಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿದ್ದು, ಖಾಸಗಿ ಶಾಲೆಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ, ಈ ನಿರ್ಧಾರ ಮಾಡಿದೆ.ಪ್ರವೇಶ ಶುಲ್ಕ ತೆತ್ತು , ಸಮವಸ್ತ್ರ ಖರೀದಿಸಿದ ಬಳಿಕ ಲಾಕ್ ಡೌನ್ ಜಾರಿಗೆ ತರುತ್ತಾರೆ.
ಲಾಕ್ ಡೌನ್ ಹೇರಿಕೆ ನೆಪದಿಂದ ಆನ್ ಲೈನ್ ಕ್ಲಾಸ್ ಅನ್ನ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತವೆ. ಇದೊಂದು ದೊಡ್ಡ ಹುನ್ನಾರ ವಾಗಿದ್ದು ನಾವು ಶಾಲೆ ಆರಂಭವಾದ್ರೂ ಮಕ್ಕಳನ್ನು ಕಳುಹಿಸಲ್ಲ ಎಂದು ಹೇಳಿದ್ದಾರೆ.
ಮೇ 16 ರಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಪ್ರಾರಂಭಿಸುವ ಸುತ್ತೋಲೆಯನ್ನ ಶಿಕ್ಷಣ ಇಲಾಖೆ ಹೊರಡಿಸಿದೆ. ಇದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.
PublicNext
28/04/2022 07:50 pm