ದೊಡ್ಡಬಳ್ಳಾಪುರ: ಇಂದಿನಿಂದ ಎಪ್ರಿಲ್ 11ರವೆರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಕೋವಿಡ್ ಹಿನ್ನೆಲೆ ಅಗತ್ಯ ಮುಂಜಾಗೃತ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕೋವಿಡ್ ಹಿನ್ನೆಲೆ ಅಗತ್ಯವಾದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ತಾಲೂಕಿನಲ್ಲಿದ್ದ 14 ಪರೀಕ್ಷಾ ಕೇಂದ್ರಗಳನ್ನು 17ಕ್ಕೆ ಏರಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 3,679 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕೇವಲ ಇಬ್ಬರು ವಿದ್ಯಾರ್ಥಿಗಳು ಪುನರಾವರ್ತಿತ ಪರೀಕ್ಷೆ ಎದುರಿಸಲಿದ್ದಾರೆ.
ಪರೀಕ್ಷೆ ಬರೆಯುತ್ತಿರುವ ತಾಲೂಕಿನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಶಾಸಕ ಟಿ. ವೆಂಕಟರಮಣಯ್ಯ, ಧೈರ್ಯದಿಂದ ಪರೀಕ್ಷೆ ಎದುರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರಕ್ಕೆ ಪ್ರಥಮ ಸ್ಥಾನ ಬರುವಂತೆ ಉತ್ತಮ ಅಂಕ ಪಡೆದು ಉತ್ತಿರ್ಣರಾಗುವಂತೆ ಶುಭ ಹಾರೈಸಿದರು.
Kshetra Samachara
28/03/2022 08:45 am