ಬೆಂಗಳೂರು: ವಿದ್ಯಾರ್ಥಿನಿಯರ ಹಿಜಾಬ್ ಪ್ರಶ್ನೆ ಬಳಿಕ ಟರ್ಬನ್ ಧರಿಸುತ್ತಿದ್ದ ಕಾಲೇಜು ಯೂನಿಯನ್ ಅಧ್ಯಕ್ಷೆಯನ್ನು ಕರೆದು ಕಾಲೇಜು ಆಡಳಿತ ಮಂಡಳಿಯನ್ನು ತೆಗೆಯಲು ಒತ್ತಾಯಿಸಿರುವ ಘಟನೆ ನಗರದ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದಿದೆ.
ಹಿಜಾಬ್ಗೆ ಅವಕಾಶ ಇಲ್ಲ ಎಂದರೆ ಟರ್ಬನ್ ಯಾಕೆ ಎಂದು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ಗುರುವಾರ ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಸೂಚನೆಯಂತೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಮೊದಲಿನಿಂದಲೂ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಹಿಜಾಬ್ ಧರಿಸಲು ತರಗತಿಯಲ್ಲಿ ಅವಕಾಶ ಇಲ್ಲ. ಆದರೆ ಕೋರ್ಟ್ ಆದೇಶದ ಬೆನ್ನಲೆ ಪ್ರಶ್ನೆ ಮಾಡಿದ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು, ಕೋರ್ಟ್ ಆದೇಶದಲ್ಲಿ ಧರ್ಮಸೂಚಕ ವಸ್ತ್ರಕ್ಕೆ ಅವಕಾಶ ಇಲ್ಲ ಎಂದು ಇದೆ. ನಾಮ್ಮ ಕಾಲೇಜು ವಿದ್ಯಾರ್ಥಿನಿಯ ಸಂಘದ ಅಧ್ಯಕ್ಷೆ ಟರ್ಬನ್ ಧರಿಸುತ್ತಾರೆ. ಟರ್ಬನ್ ಹಾಕಲು ಅವರಿಗೆ ಯಾಕೆ ಅವಕಾಶ ಮೇಡಂ ಎಂದು ಪ್ರಶ್ನೆ ಮಾಡಿದ್ದಾರೆ.
ಟರ್ಬನ್ ತಗೆಯಲು ಸಾಧ್ಯತೆ ಇದೆಯಾ ಎಂದು ಆಡಳಿತ ಮಂಡಳಿ ಗುರುವಾರ ಕಾಲೇಜು ಪ್ರಾರಂಭದ ಬಳಿಕ ಪ್ರಶ್ನಿಸಿದೆ. ಆಗ ವಿದ್ಯಾರ್ಥಿನಿ ಟರ್ಬನ್ ನಮ್ಮಲ್ಲಿ ಕಡ್ಡಾಯ ಎಂದು ಹೇಳಿದ್ದಾಳೆ. ವಿದ್ಯಾರ್ಥಿನಿಯ ಪೋಷಕರು ಸಹ ಆಡಳಿತ ಮಂಡಳಿಗೆ ಇದೇ ಮಾತು ತಿಳಿಸಿದ್ದಾರೆ.
Kshetra Samachara
24/02/2022 06:32 pm