ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಚ್ಛತೆಗಾಗಿ ರಾಜ್ಯದಲ್ಲೆ ಮೊದಲ ಸ್ವಚ್ಛ ಶಾಲೆ ಪುರಸ್ಕಾರ ಪಡೆದಿದೆ. ಶಾಲೆಯ ಸ್ವಚ್ಛತೆ ಪರಿಶೀಲಿಸಿ, ಆರಕ್ಕೂ ಹೆಚ್ಚು ಮಾನದಂಡ ಪೂರೈಸಿದ್ದಕ್ಕೆ, ಶಾಲೆಯನ್ನು ಸ್ವಚ್ಛ ಶಾಲೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.
ಸ್ವಚ್ಛ ಶೌಚಾಲಯ, ಮಕ್ಕಳ ಸ್ವಚ್ಛತೆ, ಕೊರೊನಾ ಜಾಗೃತಿ, ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಹೀಗೆ ಅನೇಕ ಮಾನದಂಡಗಳನ್ನು ವಿಧಿಸಲಾಗಿತ್ತು. ಶಾಲೆಯ ಕ್ಯಾಂಪಸ್ ಸಹ ಉತ್ತಮವಾಗಿತ್ತು. ಬಯಪಾ ಅನುದಾನದಡಿ ಶಾಲೆಯ ಅಭಿವೃದ್ಧಿಯಾಗಿತ್ತು.
ಪ್ರಾಥಮಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು. ಇದೇ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಜನಾರ್ಧನ್ ಮಾತನಾಡಿ, ಶಾಲೆಯ ಮಕ್ಕಳು ಸಿಬ್ಬಂದಿ ಮತ್ತು ಎಲ್ಲಾ ಜನರ ಸಮನ್ವಯತೆಯಿಂದ ನಮ್ಮ ಶಾಲೆಗೆ ಈ ಗೌರವ ಸಂದಿದೆ. ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
Kshetra Samachara
31/07/2022 11:02 pm