ಬೆಂಗಳೂರು: ಬಿಬಿಎಂಪಿ ಶಿಕ್ಷಣ ಕ್ಷೇತ್ರದಲ್ಲಿ ಈ ವರ್ಷ ಹೊಸ ಇತಿಹಾಸ ನಿರ್ಮಿಸುವುದಕ್ಕೆ ಮುಂದಾಗಿದೆ. ಹೌದು, ತನ್ನ 198 ವಾರ್ಡ್ ಗಳಲ್ಲಿ ಶಿಕ್ಷಣ ವಂಚಿತ ಮಕ್ಕಳಿಗೆ ಹೊಸ ಯೋಜನೆ ತರುವುದಕ್ಕೆ ಮುಂದಾಗಿದೆ.
ಅಂದುಕೊಂಡಂತೆ ಆದರೆ ಇದೇ ಆಗಸ್ಟ್ 15ರಿಂದ ಯೋಜನೆ ಜಾರಿಯಾಗುವ ಲಕ್ಷಣ ಕಾಣಿಸುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಶಿಕ್ಷಣಕ್ಕೆಂದು ವರ್ಷಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದರೂ ಅಂದು ಕೊಂಡಷ್ಟು ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ.
ಕೂಲಿ ಕಾರ್ಮಿಕ ವರ್ಗದ ಮಕ್ಕಳು, ಬಡ ಕುಟುಂಬದ ಮಕ್ಕಳು ಶಾಲೆಗೆ ಬರದೆ ದಿನಗೂಲಿಗೆ ಹೋಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಈ ಶಿಕ್ಷಣ ವಂಚಿತ ಮಕ್ಕಳು ಲಕ್ಷಕ್ಕೂ ಅಧಿಕವಾಗಿದ್ದಾರೆ. ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡುವ ಉದ್ದೇಶದಿಂದ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾದ್ ಮನೋಹರ್ ಹೊಸ ಶಿಕ್ಷಣ ಯೋಜನೆ ಜಾರಿಗೆ ತರಲು ಹೊರಟಿದ್ದಾರೆ.
ಈ ಹಿಂದೆ ಬಳ್ಳಾರಿ ಡಿ.ಸಿ. ಆಗಿ ಕಾರ್ಯ ನಿರ್ವಹಿಸಿದ ಮನೋಹರ್, ರಾತ್ರಿ ಶಿಕ್ಷಣ ಯೋಜನೆ ಜಾರಿಗೆ ತಂದು ಸಕ್ಸಸ್ ಆಗಿದ್ದರು. ಅದೇ ರೀತಿಯ ರಾತ್ರಿ ಶಾಲೆ ಅರಂಭಿಸಲು ಈ ವಿನೂತನ ಯೋಜನೆಯ ಸಾಧಕ- ಬಾಧಕದ ಬಗ್ಗೆ ಚರ್ಚೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಯೋಜನೆ ಹಾಕಿದ್ದಾರೆ.
ಶಾಲೆಗೆ ಬರುವ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಲೇಖನ ಸಾಮಗ್ರಿ, ಯೂನಿಫಾರ್ಮ್,
ಉಚಿತ ಇಸ್ಕಾನ್ ಊಟ.
ನುರಿತ ಶಿಕ್ಷಕರಿಂದ ಪಠ್ಯಪ್ರವಚನ, ಮನೆಗೆ ತೆರಳಲು ಉಚಿತ ಬಸ್ ವ್ಯವಸ್ಥೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವರ್ಷಕ್ಕೆ ಒಂದು ಬಾರಿ ಉಚಿತ ಶೈಕ್ಷಣಿಕ ಪ್ರವಾಸ ಯೋಜನೆಯಲ್ಲಿ ಒಳಗೊಂಡಿದೆ.
Kshetra Samachara
12/06/2022 07:54 pm