ಸಿಇಟಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕೆಇಎ ಬೋರ್ಡ್ ಮುಂದೆ ರಿಪೀಟರ್ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ಹೊರಹಾಕಿದ ಘಟನೆ ಇಂದು ನಡೆದಿದೆ. ಮಲ್ಲೇಶ್ವರಂನ ಕೆಇಎ ಬೋರ್ಡ್ ಮುಂದೆ ಸಿಇಟಿ ರಿಪೀಟರ್ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ನಲ್ಲಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಸಿಇಟಿ ಮಾರ್ಕ್ಸ್ ಜೊತೆ ಪಿಯು ಅಂಕ ಸೇರಿಸಿ ಫಲಿತಾಂಶವನ್ನು ಕೆಇಎ ನೀಡುತ್ತಿತ್ತು. ಆದರೆ ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿತ್ತು. ಹೀಗಾಗಿ ಕೇವಲ ಸಿಇಟಿ ಅಂಕವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಅದರಂತೆ ಈ ಬಾರಿ ಪರೀಕ್ಷೆ ಬರೆದ ರಿಪೀಟರ್ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕ ಪರಿಗಣನೆಗೆ ತೆಗೆದುಕೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ 15 ಸಾವಿರ ರ‍್ಯಾಂಕ್ ಒಳಗೆ ದೊರೆಯುತ್ತಿದ್ದದ್ದು, ಇದೀಗ ಒಂದು ಲಕ್ಷದ ಮೇಲೆ ರ‍್ಯಾಂಕ್ ರಿಪೀಟರ್ಸ್ ಗೆ ಬಂದಿದೆ.
ಈ ಸಮಸ್ಯೆ ಪರಿಹರಿಸುವಂತೆ ಕೆಇಎ ಮುಂದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಜಮಾವಣೆಗೊಂಡಿದ್ದಾರೆ. ಅಲ್ಲದೇ ಸಚಿವ ಡಾ.ಅಶ್ವಥ್ ನಾರಾಯಣ ಮನೆ ಮುಂದೆ ಪ್ರತಿಭಟನೆ ಕೂಡಾ ನಡೆಸಲಿದ್ದಾರೆ.
ವರದಿ - ಗಣೇಶ್ ಹೆಗಡೆ
PublicNext
30/07/2022 06:20 pm