ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 150 ವರ್ಷದಿಂದ ಮೊಹರಂ ಆಚರಿಸುತ್ತಿದೆ ಹಿಂದೂ ಕುಟುಂಬ

ದೊಡ್ಡಬಳ್ಳಾಪುರ: ಮೊಹರಂ ಹಿಂದೂ ಮುಸ್ಲಿಮರ ಭಾವಕೈತೆಯ ಹಬ್ಬ. ಜಾತಿ ಧರ್ಮದ ಬೇಧ ಇಲ್ಲದೆ ಆಚರಿಸುವ ಪ್ರಮುಖ ಹಬ್ಬ. ನಗರದ ಲಿಂಗಾಯತ ಸಮುದಾಯಕ್ಕೆ ಸೇರಿದ ಗೌರಮ್ಮ ವಂಶಸ್ಥರು 5 ತಲೆಮಾರುಗಳ 150 ವರ್ಷದಿಂದ ಮೊಹರಂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಮೊಹರಂ ಕೊನೆಯ ದಿನವಾದ ಇಂದು ವಂಶಸ್ಥರೆಲ್ಲರು ಒಂದೆಡೆ ಸೇರಿ ಸಂಭ್ರಮದಿಂದ ಆಚರಿಸಿದರು.

ದೊಡ್ಡಬಳ್ಳಾಪುರ ನಗರದ ನಗರ್ತಕರ ಪೇಟೆಯ ಲಿಂಗಾಯತ ಸಮುದಾಯಕ್ಕೆ ಸೇರಿದ ಗೌರಮ್ಮ ವಂಶಸ್ಥರು ಮೊಹರಂ ಹಬ್ಬವನ್ನು ಬಹಳ ಸಂಭ್ರಮ ಸಡಗರಿಂದ ಆಚರಿಸಿದರು, ಗೌರಮ್ಮ ವಂಶಸ್ಥರಾದ ಜಿ.ಪಿ ಶಿವರುದ್ರಪ್ಪನವರ ನೇತೃತ್ವದಲ್ಲಿ ಮೊಹರಂ ಆಚರಣೆಯನ್ನ ಮಾಡಲಾಗುತ್ತಿದೆ, 150 ವರ್ಷಗಳ ಹಿಂದೆ ಶಿವರುದ್ರಪ್ಪನವರ ಮುತ್ತಜ್ಜನಿಗೆ 16 ಕಣ್ಣಿನ ಬಾವಿಯಲ್ಲಿ ಚಿನ್ನದ ಹಸ್ತ ಸಿಕ್ಕಿದೆ. ಅದನ್ನ ಮನೆಗೆ ತಂದ ಅವರು ಬಹಳ ಶ್ರದ್ಧೆ ಭಕ್ತಿಯಿಂದ ಮೊಹರಂ ಆಚರಣೆಯನ್ನ ಆರಂಭಿಸಿದ್ದಾರೆ.

ಮೊಹರಂ ಆಚರಣೆಗಾಗಿ ಗೌರಮ್ಮ ವಂಶಸ್ಥರು ಗುಡಿಯನ್ನ ಕಟ್ಟಿದ್ದಾರೆ, ಸ್ಥಳೀಯವಾಗಿ ಈ ಗುಡಿ ನಗರ್ತಕರ ಪೇಟೆಯ ಬಾಬಯ್ಯನ ಗುಡಿ ಎಂದೇ ಪ್ರಸಿದ್ದಿ ಪಡೆದಿದೆ, ಬಹುತೇಕ ಮುಸ್ಲಿಮರು ಬಾಬಯ್ಯನ ಗುಡಿಗೆ ಬಂದು ತಮ್ಮ ಇಷ್ಟಾರ್ಥ ಬೇಡಿಕೊಳ್ಳುವರು. ಪ್ರತಿ ಶುಕ್ರವಾರ ವಿಶೇಷ ಪೂಜೆ ಸಹ ಮಾಡಲಾಗುವುದು, ಮೊಹರಂ ಹಬ್ಬದಲ್ಲಿ ಗೌರಮ್ಮ ವಂಶಸ್ಥರು ಒಂದೆಡೆ ಸೇರುವರು, ಮೊಹರಂ ಆಚರಣೆಯ 11 ದಿನ ಹಿಂದೂ ದೇವರುಗಳಿಗೆ ಪೂಜೆ ಮಾಡುವುದಿಲ್ಲ, ದೇವರ ಪೋಟೋಗಳಿಗೆ ಬಟ್ಟೆಯಿಂದ ಮರೆಮಾಡಿ ಮೊಹರಂ ಆಚರಣೆ ಮಾಡುವರು. 9 ನೇ ದಿನ ಬಾಬಯ್ಯನ ಗುಡಿಯನ್ನ ವಿದ್ಯುತ್ ದೀಪಾಲಂಕಾರದಿಂದ ಅಲಂಕಾರ ಮಾಡುವರು, ಕುಟುಂಬದ ಹೆಣ್ಣು ಮಕ್ಕಳು ಸಹ ಬಂದು ಮೊಹರಂ ಆಚರಣೆಯಲ್ಲಿ ಪಾಲ್ಗೊಳುವರು.

Edited By : Nagesh Gaonkar
PublicNext

PublicNext

10/08/2022 01:43 pm

Cinque Terre

25.05 K

Cinque Terre

0

ಸಂಬಂಧಿತ ಸುದ್ದಿ