ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜೂನ್ ತಿಂಗಳ ಹೆಜ್ಜೆ ಗುರುತು‌ ಕಾರ್ಯಕ್ರಮ!

ಅನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಜೂನ್ ತಿಂಗಳ ಕಾರ್ಯಕ್ರಮಗಳ ಹೆಜ್ಜೆ ಗುರುತು ಸಂಚಿಕೆ ಬಿಡುಗಡೆಯನ್ನು ಅತ್ತಿಬೆಲೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ ವಿಶ್ವನಾಥ್ ನೆರವೇರಿಸಿದರು.

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇನ್ಸ್ ಪೆಕ್ಟರ್ ವಿಶ್ವನಾಥ್ ಐ ಟಿ ಬಿಟಿ ಕಂಪನಿಗಳಿಂದ ಕನ್ನಡ ಉಳಿಯುವುದಿಲ್ಲ ಜನಸಾಮಾನ್ಯರು ಹಳ್ಳಿಗಾಡಿನಲ್ಲಿ ಕನ್ನಡವನ್ನು ಉಳಿಸಿದ್ದಾರೆ ಗಡಿಗಳಲ್ಲಿ ತಮಿಳು ತೆಲುಗು ಇದ್ದರೂ ಕೂಡ ಕನ್ನಡ ಭಾಷೆ ಸಮೃದ್ಧವಾಗಿ ಜೀವಂತಿಕೆಯನ್ನ ಪಡೆದುಕೊಂಡಿದೆ ಕನ್ನಡಿಗರು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ಹೃದಯವಂತರಾಗಿದ್ದಾರೆ ಎಂದು ತಿಳಿಸಿದರು.

ಕಾಜಾವೇ ರಾಜ್ಯಾಧ್ಯಕ್ಷರಾದ ಮಂಜುನಾಥ ದೇವ ಮಾತನಾಡಿ ಪೊಲೀಸ್ ಠಾಣೆಗಳಲ್ಲಿ ಇರುವ ವಾತಾವರಣವನ್ನು ಬದಿಗೆ ಸರಿಸಿ ಕನ್ನಡದ ಕಂಪನ ಬೆಳೆಸುತ್ತಿರುವುದು ಶ್ಲಾಘನೀಯ ಇಂದು ಅನ್ಯ ರಾಜ್ಯದ ಭಾಷಿಕರ ನಡುವೆ ಕನ್ನಡವನ್ನು ಉಳಿಸಿ ಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿದರಗುಪ್ಪೆ ರಾಜಪ್ಪ ಬಿ ಎಂ ವೆಂಕಟೇಶ್ ಪುರಸಭೆ ಸದಸ್ಯರಾದ ನಾರಾಯಣಸ್ವಾಮಿ ಮುನಿರಾಜು ಮಾಜಿ ಅಧ್ಯಕ್ಷರಾದ ಗಣೇಶ್ ಅತ್ತಿಬೆಲೆ ರವಿ ಕಾಜಾವೇ ನಾಗರತ್ನ ಕೆ ನಾಗರಾಜ್ ಸರಸ್ವತಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

18/07/2022 05:10 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ