ಬೆಂಗಳೂರು: ಸಮಾಜ ತೊಂದರೆ ಕಷ್ಟದಲ್ಲಿದ್ದಾಗ ಜನರನ್ನು ತಿದ್ದುವ, ತಮ್ಮ ಜ್ಞಾನದ ಮೂಲಕ ಜನಾಂಗವನ್ನು ಸನ್ಮಾರ್ಗದತ್ತ ನಡೆಸುವುದು ಕಷ್ಟ. ಅಂತಹ ಕಷ್ಟದ ಕೆಲಸವನ್ನು ತಮ್ಮ ಕೀರ್ತನೆ ಸಾಹಿತ್ಯದ ಮೂಲಕ ಮಾಡಿದವರು ಕರ್ನಾಟಕದ ಶ್ರೇಷ್ಠ ಯುಗಪುರುಷ ಕೈವಾರ ತಾತಯ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ 'ಶ್ರೀಯೋಗಿ ಕೈವಾರ ಜಯಂತಿ'ಯನ್ನು ಉದ್ಘಾಟಿಸಿ ಮಾತನಾಡಿದರು. ಕ್ರಿ.ಶ.1726 ಪಾಲ್ಗುಣ ಮಾಸದ ಹುಣ್ಣಿಮೆ ದಿನಹುಟ್ಟಿದ ಯತೀಂದ್ರರ ಹುಟ್ಟುಹಬ್ಬವನ್ನು ಮಾರ್ಚ್ 27ರಂದು ಆಚರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಇದರ ಅಂಗವಾಗಿ ಇಂದು ವಿಧಾನಸೌದದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯ್ತು. ಸರ್ಕಾರದ ಪ್ರಮುಖ ಸಚಿವರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
-ಸುರೇಶ್ ಬಾಬು, Public Next ಬೆಂಗಳೂರು
Kshetra Samachara
28/03/2022 09:02 am