ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ʼಸಂಕ್ರಾಂತಿ ಸುಗ್ಗಿ ಸಂಭ್ರಮʼ; ರೈತರ ಹಿಗ್ಗಿಗೆ ಹೋರಿ ಮೆರವಣಿಗೆ ಮೆರುಗು

ವರದಿ: ಹರೀಶ್ ಗೌತಮನಂದ

ಆನೇಕಲ್: ಬಣ್ಣಬಣ್ಣದ ಬಟ್ಟೆಗಳು... ತಮಟೆ ಸದ್ದು, ಹಸಿರು ಶಾಲು ಹೊತ್ತು ಓಡಾಡುತ್ತಿರುವ ಹೋರಿಗಳು... ಎರಡೂ ಕಡೆ ಅದನ್ನು ಹಿಡಿದು ಬರುತ್ತಿರುವ ರೈತರು... ಈ ಎಲ್ಲಾ ದೃಶ್ಯಾವಳಿ ಕಂಡು ಬಂದಿದ್ದು, ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಪಂಚಾಯಿತಿಯ ತಟ್ನಳ್ಳಿಯಲ್ಲಿ.

ತಟ್ನಹಳ್ಳಿಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭ ಹಳ್ಳಿಕಾರ್ ಹೋರಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ರೈತ ಸಮುದಾಯ ಸಂತಸ ಪಟ್ಟಿತು. ಇನ್ನು, ಈ ಸಂಭ್ರಮದಲ್ಲಿ 45 ಹಳ್ಳಿಕಾರ್ ಜೋಡೆತ್ತು ಭಾಗಿಯಾಗಿದ್ದು ವಿಶೇಷ. ಹಳ್ಳಿಕಾರ್ ಹೋರಿಗಳಿಗೆ ಬಹುಮಾನ ನೀಡಿ, ಕೃಷಿಕರನ್ನು ಖುಷಿ ಪಡಿಸಲಾಯಿತು.

ಹಳ್ಳಿ ಸೊಗಡಿನ ಮತ್ತು ಪ್ರಾಚೀನ ಕಾಲದ ತಮ್ಮ ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸಂಕ್ರಾಂತಿ ಸುಗ್ಗಿಯ ಹಿಗ್ಗಿನ ಕಾರ್ಯಕ್ರಮವನ್ನು ರೈತರು ಹಮ್ಮಿಕೊಂಡಿದ್ದರು. ಬ್ಯಾಗಡದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಬೈರೇಗೌಡ, ಮಾಜಿ ಗ್ರಾಪಂ ಸದಸ್ಯ ವೆಂಕಟೇಶ್, ಪ್ರಗತಿಪರ ರೈತ, ರಾಜ್ಯಪ್ರಶಸ್ತಿ ವಿಜೇತ ಮುರುಗೇಶ್, ಮಂಜುನಾಥ್ ಬಜ್ಜಪ್ಪ, ಲಕ್ಷ್ಮಣ್ ಬಜ್ಜಪ್ಪ ಮತ್ತಿತರ ಪ್ರಮುಖರು ಭಾಗಿಯಾಗಿದ್ದರು.

Edited By : Manjunath H D
Kshetra Samachara

Kshetra Samachara

30/01/2022 09:25 pm

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ