ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ದಕ್ಷಿಣ: ಗಣೇಶ ಉತ್ಸವಕ್ಕೆ ಮುಂಚಿತವಾಗಿ ಅನುಮತಿ ಪಡೆಯಿರಿ; BBMP

ಬೆಂಗಳೂರು ; ಎರಡು ವರ್ಷಗಳ ನಂತರ ಗಣೇಶ ಉತ್ಸವಕ್ಕೆ ನಗರಾದ್ಯಂತ ಯುವಕರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಎರಡು ವರ್ಷ ಕೊರೊನ ಕಾರಣಕ್ಕೆ ವಾರ್ಡಿಗೆ ಒಂದೇ ಗಣೇಶ ಸೀಮಿತವಾಗಿತ್ತು. ಆದರೆ ಈ ವರ್ಷ ಕೊರೊನ ಇಳಿಮುಖವಾಗಿದ್ದು, ಅದ್ಧೂರಿ ಗಣೇಶ ಉತ್ಸವಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಗರದಲ್ಲಿ ಯುವಕರು ಗಣೇಶ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನ ಏರಿಯಾಗಳಲ್ಲಿ ಮಾಡುತ್ತಿದ್ದಾರೆ.

ಈ ಬಾರಿಯ ಗಣೇಶೋತ್ಸವಕ್ಕೆ ಮೊದಲೇ ಬಿಬಿಎಂಪಿ ಇಂದ ಅನುಮತಿ ಪಡೆಯಬೇಕು ಮತ್ತು ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ದಳ ನಿಂದ ಕೂಡ ಅನುಮತಿ ಮುಂಚಿತವಾಗಿಯೇ ಪಡೆಯಬೇಕು. ಸರಕಾರ ಗಣೇಶ ಉತ್ಸವ ಮಾಡುವ ಯುವಕರಿಗೆ ಗೊಂದಲ ಸೃಷ್ಟಿ ಆಗಬಾರದೆಂದು ಈ ನಾಲ್ಕು ಇಲಾಖೆಗಳನ್ನು ಒಂದೇ ಸೂರಿನಡಿ ಇಟ್ಟು ಗಣೇಶ ಉತ್ಸವಕ್ಕೆ ಅನುಮತಿ ನೀಡಲು ಸಿದ್ಧತೆಗಳು ನಡೆಯುತ್ತಿದೆ.

ಒಟ್ನಲ್ಲಿ ಈ ವರ್ಷದ ಗಣೇಶೋತ್ಸವ ಸಿಲಿಕಾನ್ ಸಿಟಿಯಲ್ಲಿ ಅದ್ಧೂರಿಯಾಗಿ ಆಚರಣೆ ಆಗಲಿದೆ. ಏರಿಯಾ ಏರಿಯಾಗಳಲ್ಲಿ ಗಣಪನ ದೇ ದರ್ಬಾರ್ ಕಂಡುಬರಲಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

22/08/2022 08:17 pm

Cinque Terre

34.49 K

Cinque Terre

1

ಸಂಬಂಧಿತ ಸುದ್ದಿ