ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ 3ವರ್ಷದ ಬಾಲಕಿ ಎಲ್ಲರಿಗೂ ತನ್ನ ತೊದಲು ನುಡಿಗಳಲ್ಲೆ ಗಣೇಶ ಹಬ್ಬದ ಶುಭಾಶಯ ಕೋರಿದ್ದಾಳೆ. ಜೊತೆಗೆ ತನ್ನ ಪೋಷಕರ ನೆರವಿನಿಂದ ಕಲಿತು ಹಾಡಿರುವ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ವೈರಲ್ ಆಗ್ತಿದೆ. ಹಾಡಲ್ಲಿ ಬಾಲಕಿಯ ಮುಗ್ಧತೆ, ಹಠಕ್ಕೆ ಬಿದ್ದಂತೆ ದೊಡ್ಡ ಸಂಗೀತಗಾರರು ನಾಚುವಂತೆ ತಾದಾತ್ಮತೆ ಕೇಳುಗರನ್ನು ತಲೆ ದೂಗುವಂತೆ ಮಾಡುತ್ತದೆ
ಮನೆಯಂಗಳದಾಗ ನಿಂದಾನ.!
ತಂದಾನಿ ತಾನಿ ಎಂದಾನ..!!
ಗಣಪ್ಪ ಬಂದಾನ ಬಾಳಿಗೆ ಬೆಳಕ್ಕ ತಂದಾನ..!!
ಈ ಸಂಪೂರ್ಣ ಹಾಡನ್ನ ಮಗುವಿನ ಭಾವಭಕ್ತಿಯಲ್ಲಿ ಕೇಳಿದರೆ, ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಗಣೇಶ ಹಬ್ಬಕ್ಕೆ ಈ ಹಾಡು ಅತ್ಯದ್ಭುತವಾಗಿ ಮೂಡಿಬಂದಿದ್ದು, ಬಾಲಕಿ ಭಾವ ಭಕ್ತಿ ಎಲ್ಲರನ್ನು ಮೂರು ನಿಮಿಚಷ ತಲೆದೂಗುವಂತೆ ಮಾಡುತ್ತದೆ..
ಎಲ್ಲರಿಗೂ ಹಾಡನ್ನು ಹಾಡಿದ ಬಾಲಕಿಗೆ, ಪೋಷಕರಿಗೆ, ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ.
PublicNext
31/08/2022 04:23 pm