ಆನೇಕಲ್:ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾತನಾಡಿ ದ ಕಸಾಪ ಮಾಜಿ ಸಂಚಾಲಕರಾದ ಮಧು ಎಸ್ ಮೂರ್ತಿ ಉತ್ತಮ ಸಮಾಜ ಕಟ್ಟಲು ಶಿಕ್ಷಕರ ಪಾತ್ರ ಅಮೂಲ್ಯವಾದದು ಮುಗ್ಧ ಮಕ್ಕಳಿಗೆ ಅಕ್ಷರದ ಜ್ಞಾನವನ್ನು ಉಣ ಬಡಿಸಿ ಉತ್ತಮ ಪ್ರಜೆಯಾಗಿಸುವ ಶಿಕ್ಷಕರ ತ್ಯಾಗ ಹಿಮಾಲಯಕ್ಕೂ ಎತ್ತರವಾದದ್ದು ಎಂದು ತಿಳಿಸಿದರು.
ಕರ್ನಾಟಕ ಸಂತೆ ಮತ್ತು ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ಮಾತನಾಡಿ ಹಿಂದಿನ ಶಿಕ್ಷಕರು ತಮ್ಮ ಉಡುಪಿನ ಮೂಲಕವೇ ಮಕ್ಕಳಲ್ಲಿ ಶಿಸ್ತುಭದ್ಧವಾದ ಜೀವನ ಕ್ರಮವನ್ನು ಮೂಡಿಸುತ್ತಿದ್ದರು ಎಂದು ತಿಳಿಸಿದರು.
Kshetra Samachara
05/09/2022 07:12 pm