ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದ ವೇಣುಗೋಪಾಲಸ್ವಾಮಿಗೆ ಕೋಟಿ ರೂ. ಬ್ರಹ್ಮರಥ ಅರ್ಪಣೆ

ಕೆಂಪೇಗೌಡರ ರಾಜಧಾನಿ ಯಲಹಂಕದ ನಗರದೇವರು ಹಾಗೂ ಮನೆ ದೇವರು ವೇಣುಗೋಪಾಲಸ್ವಾಮಿ. ಈ ದೇವಸ್ಥಾನ ಪುರಾಣ ಮತ್ತು ಇತಿಹಾಸಗಳ ಸಂಪರ್ಕ ಕೊಂಡಿಯಾಗಿದೆ. ಒಂದೇ ಆವರಣದಲ್ಲಿ ವೇಣುಗೋಪಾಲಸ್ವಾಮಿ ಮತ್ತು ವಿಶ್ವನಾಥೇಶ್ವರ ಸನ್ನಿಧಾನಗಳಿದ್ದು ಹರಿಹರನ ಸಂಗಮಕ್ಷೇತ್ರ ಭಾವೈಕ್ಯತೆ ತಾಣವಾಗಿದೆ.

ಕುಂದಾಪುರದ ಕೋಟೇಶ್ವರದ ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯರು 29 ಅಡಿಯ ರಥವನ್ನು ಸಾಗುವನಿ, ಭೋಗಿ, ಹೆಬ್ಬಲಸು ಮತ್ತು ತೇಗದ ಮರಗಳಿಂದ ನಿರ್ಮಿಸಿದ್ದಾರೆ.

ಬ್ರಹ್ಮರಥ ನಿರ್ಮಾಣಕ್ಕೆ 77ಲಕ್ಷ ಕರ್ಚಾಗಿದ್ದಾರೆ, ದೇವಸ್ಥಾನದ ನವೀಕರಣ ಮತ್ತು ದ್ವಜಸ್ತಂಭ ನಿರ್ಮಾಣಕ್ಕೆ 25 ಲಕ್ಷ ಕರ್ಚಾಗಿದೆ. 33 ಅಡಿ ಎತ್ತರದ ಧ್ವಜಸ್ತಂಭವನ್ನು ದಾಂಡೇಲಿಯ ತೇಗದ ಮರದಿಂದ ನಿರ್ಮಿಸಲಾಗಿದೆ. ಶಾಸಕ ವಿಶ್ವನಾಥ್ ಸೇರಿದಂತೆ ಯಲಹಂಕ ನಾಡಿನ ಭಕ್ತಸಮೂಹ ಒಟ್ಟು 1 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೈಜೋಡಿಸಿದ್ದಾರೆ. ಈ ಭಾರಿ ವೇಣುಗೋಪಾಲ ಸ್ವಾಮಿಗೆ ಎರಡು ಭಾರಿ ರಥೋತ್ಸವ ನಡೆಯಲಿದೆ.

ಮುಜರಾಯಿ ದೇವಸ್ಥಾನ ಆಗಿದ್ದರೂ ಈ ದೇವಾಲಯ ಟ್ರಸ್ಟ್ ಮೂಲಕ ನಡೆಯುತ್ತಿದೆ. ಎಪ್ರಿಲ್ 16ರಂದು ವಾರ್ಷಿಕ ರಥೋತ್ಸವ ನಡೆಯಲಿದೆ. ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್, ಆಡಳಿತ ಮಂಡಳಿ ಜೊತೆ ಯಲಹಂಕ ನಾಡಿನ ಸಾವಿರಾರು ಜನ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ಸುರೇಶ್ ಬಾಬು Public Next ಯಲಹಂಕ..

Edited By :
PublicNext

PublicNext

05/04/2022 12:45 pm

Cinque Terre

27.54 K

Cinque Terre

0

ಸಂಬಂಧಿತ ಸುದ್ದಿ