ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಸಿಬಿಯಿಂದ ಕುಖ್ಯಾತ ರೌಡಿ ಸಂಜೂ ಬಾಲ‌ ಕಟ್ ಮಾಡಲು ಗೂಂಡಾಸ್ತ್ರ ಪ್ರಯೋಗ

ಬೆಂಗಳೂರು:ಗುಂಪು ಕಟ್ಟಿಕೊಂಡು ಬೆಂಗಳೂರು ರೌಡಿ ಪಾಳುದ ಅಧಿಪತಿಯಾಗು ಹೊರಟಿದ್ದ ಕುಖ್ಯಾತ ರೌಡಿಗೆ ಸಿಸಿಬಿ ಬಿಸಿ ಮುಟ್ಟಿಸಿದೆ. ಈ ಹಿಂದೆ ಸಾಕಷ್ಟು ಪ್ರಕರಣದಲ್ಲಿ ಬಂಧಿಯಾಗಿದ್ದ ಕುಖ್ಯಾತ ಪಾತಕಿ ಸಂಜಯ್ @ ಸಂಜು ನನ್ನ ಸಿಸಿಬಿ ಗೂಂಡಾ ಆಕ್ಟ್ ಅಡಿಯಲ್ಲಿ ರೌಡಿಶೀಟರ್ ಬಂಧಿಸಿದ್ದಾರೆ.

ನಟೋರಿಯಸ್ ರೌಡಿಶೀಟರ್ ಕುಳ್ಳು ರಿಜ್ವಾನ್ ಸಹಚರನಾಗಿದ್ದ ಸಂಜು ಸಹೋದರ ವೀರೂ‌ ಜೊತೆ‌ ಸೇರಿ ಕೊಲೆ,ಕೊಲೆ ಯತ್ನ,ಡಕಾಯಿತಿ,ಅಪಹರಣ, ಹಲ್ಲೆ ಆರೋಪ,ಎನ್ ಡಿಪಿಎಸ್ , ದರೋಡೆಗೆ ಸಂಚು ಸೇರಿ ಹಲವು ಪ್ರಕರಣದಲ್ಲಿ ಸಂಜೂ ಭಾಗಿಯಾಗಿದ್ದ. ಅಲ್ಲದೆ ನಗರದ ಕೆಲ ರೌಡಿಗಳ ಕೊಲೆಗೆ ಸಂಚೂ ರೂಪಿಸಿದ್ದ.

ನಗರದ ಪಶ್ಚಿಮ ಹಾಗೂ ದಕ್ಷಿಣ ವಿಭಾಗದಲ್ಲಿ ಅಪರಾಧ ಕೃತ್ಯಗಳಲ್ಲಿ ಸಕ್ರಿಯನಾಗಿದ್ದ ಸಂಜೂ ಮೇಲೆ ಗೂಂಡಾ ಕಾಯ್ದೆ ಅಸ್ತ್ರವನ್ನ ಸಿಸಿಬಿ ಪ್ರಯೋಗಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

26/09/2022 07:01 pm

Cinque Terre

1.47 K

Cinque Terre

1

ಸಂಬಂಧಿತ ಸುದ್ದಿ