ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣಪತಿಗೂ ಚಾಕು ತೋರಿಸಿ ಗಲಾಟೆ: ಯುವಕ ಜೈಲುಪಾಲು

ಬೆಂಗಳೂರು: ಎಣ್ಣೆ ಬಿಡು ಅಂದಿದ್ದಕ್ಕೆ ಚಾಕು ಹಿಡಿದ ಯುವಕನೊಬ್ಬ ಇಡೀ ಏರಿಯಾದಲ್ಲಿ ಭಯ ಹುಟ್ಟಿಸಿದ್ದಾನೆ. ಚಾಕು ಹಿಡಿದು ಸಿಕ್ಕ ಸಿಕ್ಕ ಕಾರಿನ ಗ್ಲಾಸ್ ಒಡೆದು ಮೆರವಣಿಗೆ ಬರ್ತಿದ್ದ ಗಣೇಶನಿಗೂ ಚಾಕು ತೋರಿಸಿ ವಿಕೃತಿ ಮೆರೆದಿದ್ದಾನೆ.

ಉಪೇಂದ್ರ ಸಿನಿಮಾದಲ್ಲಿ ಗಣೇಶನಿಗೆ ಆವಾಜ್ ಹಾಕಿದ ರೀತಿಯಲ್ಲೆ ಈತನೂ ಆವಾಜ್ ಹಾಕಿ ಜೈಲು ಸೇರಿದ್ದಾನೆ.

ಯಶವಂತಪುರದ ದೇವರಾಯಪಾಳ್ಯದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತೇಜು ಎಂಬ ಯುವಕನಿಗೆ ಮದ್ಯ ಸೇವನೆ ಬಿಡಿಸಲು ಮನೆಯವರು ಮುಂದಾಗಿದ್ರು. ಈ ಸಮಯದಲ್ಲಿ ಮನೆಯವರ ಜೊತೆ ಗಲಾಟೆ ಮಾಡಿದ್ದ ತೇಜು ಚಾಕು ಹಿಡಿದು ಮನೆಯವರಿಗೆ ಹೆದರಿಸಿದ್ದ.

ನಂತರ ಅದೇ ರಸ್ತೆಯಲ್ಲಿದ್ದ ತನ್ನ ಮಾವನ ಕಾರಿನ ಗ್ಲಾಸ್ ಒಡೆದು ಮನೆಗೆ ನುಗ್ಗಿ ಗಲಾಟೆ ಮಾಡಿದ್ದ. ಇದಾದ ನಂತರ ಮೂರ್ನಾಲ್ಕು ವಾಹನದ ಗ್ಲಾಸ್ ಒಡೆದು ಗಣೇಶ ಮೆರವಣಿಗೆ ಬರ್ತಿದ್ದ ವೇಳೆ ಅಲ್ಲೂ ಗಲಾಟೆ ಮಾಡಿದ್ದ. ಗಣೇಶನ ಮೆರವಣಿಗೆಯ ಸಮಯದಲ್ಲಿ ಟ್ರಾಕ್ಟರ್ ಮೇಲೆ ಹತ್ತಿ ಗಣೇಶನಿಗೂ ಚಾಕು ತೋರಿಸಿ ಗಣೇಶನಿಗೆ ಆವಾಜ್ ಹಾಕಿದ್ದಾನೆ. ಈ ಸಮಯದಲ್ಲಿ ಅಲ್ಲೇ ಇದ್ದ ಯಶವಂತಪುರ ಪೊಲೀಸ್ರು ಯುವಕನನ್ನ ಬಂಧಿಸಿ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.

Edited By : Shivu K
PublicNext

PublicNext

09/09/2022 01:42 pm

Cinque Terre

31.67 K

Cinque Terre

0

ಸಂಬಂಧಿತ ಸುದ್ದಿ