ಬೆಂಗಳೂರು: ಅಕ್ರಮವಾಗಿ ಹೊರ ರಾಜ್ಯದಿಂದ ಚಿರತೆ ಚರ್ಮ, ಹಲ್ಲು,ಉಗುರು ತಂದು ರಾಜ್ಯದಲ್ಲಿ ಸಾಗಾಟ ಮಾಡ್ತಿದ್ದ ಇಂಜಿನಿಯರಿಂಗ್ ಪದವೀಧರನನ್ನ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.
ಚರಣ್ ಬಂಧಿತ ಆರೋಪಿಯಾಗಿದ್ದು, ತುಮಕೂರಿನ ಚಿಕ್ಕಬೆನಕನಕೆರೆ ಬಳಿ ಬ ಸಿಐಡಿ ಪೊಲೀಸರಿಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಸಿಐಡಿ ಅರಣ್ಯ ಘಟಕದ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಅಂಡ್ ಖಚಿತ ಮಾಹಿತಿ ಮೇರೆಗೆ ಟಿವಿಎಸ್ ಬೈಕ್ ನಲ್ಲಿ ಚಿರತೆ ಚರ್ಮ,ಉಗುರು,ಮುಖದ ಭಾಗವನ್ನ ಸಾಗಿಸ್ತಿದ್ದ ಆರೋಪಿಯನ್ನ ಫಾಲೋಮಾಡಿದ್ರು.
ಆರೋಪಿ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸಮಾಡಿಕೊಂಡಿದ್ದ. ಹೆಚ್ಚಿನ ಹಣ ಸಂಪಾದನೆ ಮಾಡೋದೃಷ್ಟಿಯಿಂದ ಈ ಅಡ್ಡದಾರಿ ಹಿಡಿದಿದ್ದ ಚರಣ ಸದ್ಯ ಪೊಲೀಸ್ರ ಅತಿಥಿಯಾಗಿದ್ದಾನೆ.ಬಂಧಿತನಿಂದ ಚಿರತೆಯ 17 ಉಗುರು, ಚರ್ಮ, ಮುಖದ ಭಾಗ ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲುಮಾಡಲಾಗಿದೆ.
Kshetra Samachara
07/09/2022 05:47 pm