ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮದ್ಯದ ಮತ್ತಲ್ಲಿ ಅವಾಂತರ ಸೃಷ್ಟಿಸಿದ ಆಂಬ್ಯುಲೆನ್ಸ್ ಚಾಲಕ

ಬೆಂಗಳೂರು: ಜೀವ ರಕ್ಷಕರು ಅಂತ ಪೊಲೀಸರು ಹಾಗೂ ಸಾರ್ವಜನಿಕರು ಆಂಬ್ಯುಲೆನ್ಸ್ ಚಾಲಕರಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಅವರು ಎಷ್ಟೇ ವೇಗವಾಗಿ ವಾಹನ ಚಲಾಯಿಸಿದರೂ, ಸಂಚಾರ ನಿಯಮ ಬ್ರೇಕ್ ಮಾಡಿದರೂ ಕೇಸ್ ಹಾಕುವುದಿಲ್ಲ. ಇದನ್ನೆ ಕೆಲವು ಆಂಬ್ಯುಲೆನ್ಸ್ ಚಾಲಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ನಮ್ಮನ್ನ ಯಾರೂ ಚೆಕ್ ಮಾಡಲ್ಲ ಯಾರೂ ಕೇಳಲ್ಲ ಅಂತ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಚಾಲನೆ ಮಾಡಿದ ಚಾಲಕನೊಬ್ಬ ಅವಾಂತರ ಸೃಷ್ಟಿಸಿದ್ದಾನೆ.

ತಡರಾತ್ರಿ ನಗರದ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಚಾಲನೆ ಮಾಡಿದ ಚಾಲಕನನ್ನು ಸಾರ್ವಜನಿಕರು ಲಾಕ್ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಂದೇ ರಸ್ತೆಯಲ್ಲಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ಹೋಗ್ತಿದ್ದ ಚಾಲಕನ್ನ ಸಾರ್ವಜನಿಕರು ಅಡ್ಡಗಟ್ಟಿ ನಿಲ್ಲಿಸಿದ್ರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಂಬ್ಯುಲೆನ್ಸ್ ಚಾಲಕ ಸಂಜೀವ್‌ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ. ಚಾಲಕ ಸಂಜೀವ್ ಮದ್ಯಪಾನ ಮಾಡಿ ಆಂಬ್ಯುಲೆನ್ಸ್ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ್ದ.

Edited By : Shivu K
PublicNext

PublicNext

01/09/2022 10:47 am

Cinque Terre

29.41 K

Cinque Terre

1

ಸಂಬಂಧಿತ ಸುದ್ದಿ