ದೊಡ್ಡಬಳ್ಳಾಪುರ: ಹನುಮ ಜಯಂತಿ ಹಿನ್ನೆಲೆ ನಿನ್ನೆ ದೇವಸ್ಥಾನದಲ್ಲಿ ಪೂಜೆ ಕಾರ್ಯಗಳು ನಡೆದು, ಮಧ್ಯರಾತ್ರಿವರೆಗೂ ದೇವಸ್ಥಾನದಲ್ಲಿದ್ದ ಭಕ್ತರ ದೇವರಿಗೆ ಪೂಜೆ ಮಾಡಿದ್ರು. ಮುಂಜಾನೆ ವೇಳೆ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಹುಂಡಿ, ಸಿಸಿ ಕ್ಯಾಮಾರ ಸಮೇತ ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಶ್ರೀವೀರಾಂಜನೇಯ ದೇವಾಲಯದಲ್ಲಿ ಇಂದು ಮುಂಜಾನೆ ಸಮಯದಲ್ಲಿ ಕಳ್ಳತನವಾಗಿದೆ, ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಕಳವು ಘಟನೆ ಬೆಳಕಿಗೆ ಬಂದಿದೆ, ನಿನ್ನೆ ದೇವಾಲಯದಲ್ಲಿ ಹನುಮಜಯಂತಿ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಲಾಗಿತ್ತು.
ರಾತ್ರಿ ಒಂದು ಗಂಟೆಯವರೆಗೂ ಪೂಜಾ ಕಾರ್ಯಕ್ರಮವಿದ್ದು ಒಂದು ಗಂಟೆಯ ನಂತರ ಕಳ್ಳತನ ನೆಡೆದಿರಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಹುಂಡಿ ಹೊಡೆದಿರುವ ಕಳ್ಳರು ಹಣ ಹಾಗೂ ಸಿಸಿ ಕ್ಯಾಮಾರದ ಡಿವಿಆರ್‌ಗಳ ಸಮೇತ ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಭಕ್ತರ ಕಾಣಿಕೆ ಹಣ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Kshetra Samachara
14/12/2024 12:08 pm