ಬೆಂಗಳೂರು: ವೀಕ್ ಎಂಡ್ ಬಂದ್ರೆ ಸಿಟಿಯಲ್ಲಿ ಮದ್ಯಪ್ರಿಯರ ಸಂಖ್ಯೆ ಹೆಚ್ಚಿರತ್ತೆ ಎಣ್ಣೆ ಮತ್ತಲ್ಲಿ ಕಿರಿಕ್ ಮಾಡೋದು ಪುಂಡಾಟ ತೊರೋದು ಎಲ್ಲಾ ಕಾಮನ್.
ಆದ್ರೆ ನಿನ್ನೆ ಬ್ರಿಗೆಡ್ ರಸ್ತೆಯಲ್ಲಿ ವಿದೇಶಿ ಮಹಿಳೆಯರ ಪುಂಡಾಟ ಮಿತಿ ಮೀರಿದ್ದು ಪೊಲೀಸ್ರ ಮೇಲೆ ಹಲ್ಲೆ ನಡೆಸಿದ್ದಾರೆ. ಕಬ್ಬನ್ ಪಾರ್ಕ್ ಹೋಯ್ಸಳ ಪೊಲೀಸ್ರು ರೌಂಡ್ಸ್ ಹೋಗಿದ್ದ ವೇಳೆ ಅವಧಿ ಮೀರಿ ಪಬ್ ಓಪನ್ ಆಗಿತ್ತು, ಇದನ್ನ ಪ್ರಶ್ನೆ ಮಾಡಿ ಎಲ್ಲರನ್ನೂ ಅಲ್ಲಿಂದ ಕಳಿಸುವ ವೇಳೆ ವಿದೇಶಿ ಮಹಿಳೆಯರು ಪೊಲೀಸ್ರ ಮೇಲೆ ಎರಗಿ ಬಿದ್ದು ಹಲ್ಲೆ ನಡೆಸಿದ್ದಾರೆ. ಸದ್ಯ ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
29/08/2022 09:12 am