ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಾಲ ತೀರಿಸಲಾಗದೆ ಮಾಟ ಮಂತ್ರದ ನಾಟಕ: ಡೋಂಗಿ ಬಾಬಾ ಶಂಕರಪ್ಪ ಅಸಲಿ ಕಹಾನಿ..!!

ಬೆಂಗಳೂರು : ಆತ ಒಬ್ಬ ಕ್ಯಾಬ್ ಡ್ರೈವರ್ ಜೊತೆಗೆ ಮೈತುಂಬಾ ಸಾಲ ಮಾಡಿಕೊಂಡಿದ್ದ, ಆ ಸಾಲವನ್ನ ತೀರಿಸಲು ಸ್ನೇಹಿತನ 24 ಲಕ್ಷ ಹಣವನ್ನ ದೋಚಲು ಅನೈತಿಕ ಪ್ಲಾನ್ ಮಾಡಿದ್ದ ಇಂಟ್ರಸ್ಟಿಂಗ್ ಅಂದ್ರೆ ಸದ್ಯ ತಾನೇ ಹೆಣೆದಿದ್ದ ಬಲೆಗೆ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಏನು ಆ ಸ್ಟೋರಿ ಅಂತೀರಾ .

ಹೀಗೆ ಸ್ಲೇಟ್ ಹಿಡಿದು ಫೋಟೋಗೆ ಫುಲ್ ಪೋಸ್ ಕೊಡ್ತಿರುವ ವ್ಯಕ್ತಿಯನ್ನು ಒಮ್ಮೆ ನೋಡ್ಕೋಬಿಡಿ. ಇದು ಯಾವುದೊ ಸಿನಿಮಾ ಕಥೆ ಇರಬಹುದು ಅನ್ಸತ್ತೆ.

ಈತನ ಹೆಸರು ಶಂಕರಪ್ಪ ಅಂತ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ರಾತ್ರಿ ಹೊತ್ತು ಕ್ಯಾಬ್ ಓಡಿಸಿಕೊಂಡು ಹೆಂಡ್ತಿ ಜೊತೆ ಆರಾಮಾಗಿ ಜೀವನ ಸಾಗಿಸುತ್ತಿದ್ದ.

ಆದ್ರೆ ಐನಾತಿ ಶಂಕ್ರಪ್ಪ ಚೀಟಿ ವ್ಯವಹಾರದಲ್ಲಿ ಹಣ ಲಾಸ್ ಮಾಡಿಕೊಂಡು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಆಗಲೇ ನೋಡಿ ಜಾಕ್ಪಾಟ್ ಹೊಡೆದಿದ್ದು.

ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಊರೆಲ್ಲಾ ಸುತ್ತಿ ಶಂಕರಪ್ಪನ ಮನೆಗೆ ಆತನ ಸ್ನೇಹಿತ ಗುರುಪ್ರಸಾದ್ ಸುರಕ್ಷತೆಯ ದೃಷ್ಟಿಯಿಂದ ಜಮೀನು ಮಾರಿದ 24 ಲಕ್ಷ ಹಣ ತಂದಿಟ್ಟಿದ್ದ.

ಇನ್ನು ದುಡ್ಡು ನೋಡಿದ ತಕ್ಷಣ ಆರೋಪಿ ಶಂಕ್ರಪ್ಪ ಸ್ನೇಹಿತನಿಗೆ ಪಂಗನಾಮ ಹಾಕಲು ಪ್ಲಾನ್ ಮಾಡಿಬಿಟ್ಟಿದ್ದ.

ಇದೇ ತಿಂಗಳು 19 ರಂದು ಆರೋಪಿ ಶಂಕ್ರಪ್ಪ ನಮ್ಮನೇಲಿ ಮಾಟ ಮಂತ್ರ ಮಾಡಿಸಿ 24 ಲಕ್ಷ ಹಣವನ್ನು ಕಳ್ಳತನ ಮಾಡಿದ್ದರು ಎಂದು ಕಥೆ ಹೇಳಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದ. ಸದ್ಯ ಪ್ರಕರಣವನ್ನು ಕೈಗೊತ್ತಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದಾಗ ಆರೋಪಿ ಶಂಕ್ರಪ್ಪ ಅಂತ ಪತ್ತೆಯಾಗಿದೆ.

ಅಷ್ಟಕ್ಕೂ ಶಂಕರಪ್ಪ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ. ಇನ್ನು ಆರೋಪಿ ಶಂಕ್ರಪ್ಪ ಪೊಲೀಸ್ ವಿಚಾರಣೆಯಲ್ಲಿ ತಾನು ಹೆಣದ್ದಿದ ಬಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ 19ನೇ ತಾರೀಖು ರಾತ್ರಿ ಕೆಲಸ ಮುಗಿಸಿಕೊಂಡು ಬಂದು ನಾನೇ ನಿಂಬೆಹಣ್ಣು ಮತ್ತು ಪತ್ರ ಬರೆದು ಮಾಟ ಮಂತ್ರ ರೀತಿಯಲ್ಲಿ ಬಿಂಬಿಸಿದ್ದೆ,ಅದಲ್ಲದೆ ಮನೆ ಮುಂದೆ ಆಪತ್ರದಲ್ಲಿ ಈ ವಿಚಾರವನ್ನು ಯಾರಿಗೂ ಹೇಳಬಾರದ ರೀತಿಯಲ್ಲಿ ಬರೆದು ಮನೆ ಮುಂದೆ ಬಿಸಾಕಿದ್ದೆ ಬೆಳಗಿನ ಜಾವ ಹೆಂಡ್ತಿ ನೋಡಿ ಅದನ್ನ ನನಗೆ ಹೇಳಿದರು.

ಆಮೇಲೆ ಗುರುಪ್ರಸಾದ್ ಸ್ನೇಹಿತನನ್ನು ಕರೆಸಿಕೊಂಡು ಬನ್ನೇರು ಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆ. ಇಷ್ಟೇಲ್ಲಾ ನಡೆಯಲು ನಾನೇ ಕಾರಣ ಅಂತ ಶಂಕ್ರಪ್ಪ ಬಾಯ್ಬಿಟ್ಟಿದ್ದಾನೆ ಶಂಕ್ರಪ್ಪನ ವಿರುದ್ಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್

ಸ್ಲಗ್

Edited By : Nagesh Gaonkar
PublicNext

PublicNext

24/08/2022 08:32 pm

Cinque Terre

33.13 K

Cinque Terre

0

ಸಂಬಂಧಿತ ಸುದ್ದಿ