ಆನೇಕಲ್: ಕುಖ್ಯಾತ ದ್ವಿಚಕ್ರ ವಾಹನ ಕಳ್ಳರನ್ನ ಬಂಧಿಸುವಲ್ಲಿ ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅತ್ತಿಬೆಲೆ ಮೂಲದ ಸಂತೋಷ್ ಎನ್ ಬಂಧಿತ ಆರೋಪಿ ಅಜ್ಮತ್ ತಲೆಮೆರೆಸಿಕೊಂಡಿದ್ದಾನೆ.
ಇನ್ನು ಆರೋಪಿಗಳಿಂದ 6 ಲಕ್ಷ ಬೆಲೆಬಾಳುವ ಏಳು ದ್ವಿಚಕ್ರ ವಾಹನಗಳನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆಶಿಶ್ ಎಂಬ ವ್ಯಕ್ತಿ ನೆರಳೂರು ಗ್ರಾಮದಲ್ಲಿ ವಾಸವಾಗಿದ್ದ ವೇಳೆ ಮನೆ ಮುಂದೆ ಗಾಡಿ ನಿಲ್ಲಿಸಿ ಹೋಗಿದ್ರಂತೆ ಮಾರನೇ ದಿನ ಆ ಜಾಗದಲ್ಲಿ ಗಾಡಿ ಇರ್ಲಿಲ್ಲ.
ಬೈಕ್ ಕಾಣದಿದ್ದಕ್ಕೆ ಬೈಕ್ ಕಳ್ಳತನವಾಗಿದೆ ಎಂದು ಅತ್ತಿ ಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದಾರೆ..
Kshetra Samachara
24/08/2022 05:18 pm