ಬೆಂಗಳೂರು: ಉದ್ಯಮಿ ಮೇಲೆ ಹಲ್ಲೆ ನಡೆಸಿ ಪಿಸ್ತೂಲ್ ತೋರಿಸಿ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ಹಿನ್ನಲೆ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಸೇರಿ ಮೂವರನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಎಪಿಜೆ ಟ್ರಸ್ಟ್ ನ ಅಧ್ಯಕ್ಷೆ ಪುಷ್ಪಲತಾ, ಅಯ್ಯಪ್ಪ@ ಅರ್ಜುನ್, ರಾಕೇಶ್ ಬಂಧಿತ ಆರೋಪಿಗಳು . ರವಿ ಇಂಡಸ್ಟ್ರಿಯಲ್ ಸಪ್ಲೈ ಕಂಪನಿ ಮಾಲೀಕರ ಮಗನಾದ ಉದ್ಯಮಿ ಸೂರಜ್ ಎಂಬಾತನ ಮೇಲೆ ಹಲ್ಲೆ ನಡೆಸಿ ನಾಲ್ಕು ಕೋಟಿ ನೀಡುವಂತೆ ಧಮ್ಕಿ ಹಾಕಿದ್ರು.
ಕಳೆದ ಎರಡು ವರ್ಷದ ಹಿಂದೆ ಸೂರಜ್‌ಗೆ ಪುಷ್ಪಲತಾ ಎಂಬಾಕೆ ಪರಿಚಯವಾಗಿದ್ಲು. ಮೂರು ತಿಂಗಳ ಹಿಂದೆ ಸರ್ಕಾರಿ ಟೆಂಡರ್ ಕೊಡುಸ್ತಿನಿ ಎಂದು ಪುಷ್ಪಲತಾ ,ಸೂರಜ್‌ಗೆ ಇನ್ನಷ್ಟು ಹತ್ತಿರವಾಗಿದ್ಲು. ಈ ವೇಳೆ ಸಂತೋಷ್ ಎಂಬಾತನನ್ನ ಪರಿಚಯ ಮಾಡಿಸಿ ಇವರು ಐ.ಎ.ಎಸ್ ಅಧಿಕಾರಿಯ ಪಿ.ಎ ಇವರು ನಿಮಗೆ ಸರ್ಕಾರಿ ಟೆಂಡರ್ ಕೊಡುಸ್ತಾರೆಂದು ನಂಬಿಸಿದ್ದಳು.
ಈ ಮಾತುಕತೆ ನಡೆಯುವ ವೇಳೆ ಏಕಾಏಕಿ ನುಗ್ಗಿದ ಅಯ್ಯಪ್ಪ@ಅರ್ಜುನ್ ಹಾಗೂ ರಾಕೇಶ್ ಸೂರಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಜೊತೆ ಸೇರಿಕೊಂಡ ಪುಷ್ಪಲತಾ ಕೂಡ ಸೂರಜ್‌ಗೆ ಹಲ್ಲೆ ನಡೆಸಿ ನಾಲ್ಕು ಕೋಟಿ ಕೊಡು ಇಲ್ಲ ಕೊಲ್ಲೋದಾಗಿ ಬೆದರಿಕೆ ಹಾಕಿದ್ಲು. ಇಡೀ ಮನೆಯನ್ನೆ ಮಾರಿದ್ರೂ ಅಷ್ಟು ಹಣವಿಲ್ಲ ಎಂದು ಹೇಳಿದಾಗ ಅಯ್ಯಪ್ಪ ತನ್ನ ಬಳಿ ಇದ್ದ ಪಿಸ್ತೂಲ್‌ನ್ನು ಸೂರಜ್ ತಲೆಗಿಟ್ಟು ಬೆದರಿಸಿದ್ದಾನೆ . ಈ ವೇಳೆ ಹೆದರಿದ ಸೂರಜ್ ತನ್ನ ಸ್ನೇಹಿತ ಗುರುಮೂರ್ತಿ ಎಂಬಾತನಿಗೆ ಕರೆ ಮಾಡಿ ಎಪಿಜೆ ಟ್ರಸ್ಟ್ ಬಳಿ 25 ಲಕ್ಷ ಹಣ ತರಲು ಹೇಳಿದ್ದ ಅದರಂತೆ ಕಚೇರಿ ಬಳಿ ಬಂದಿದ್ದ ಗುರುಮೂರ್ತಿ, ಸೂರಜ್ ಬಿಟ್ಟು ಬೇರೆ ಯಾರೋ ಇದ್ದ ಹಿನ್ನಲೆ ಹಣ ನೀಡಿರಲಿಲ್ಲ.
ನಂತರ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ಸೂರಜ್ ಬಳಿ ಬಂದ ಪುಷ್ಪಲತಾ ಈ ವಿಚಾರ ಹೊರಗಡೆ ಹೇಳಿದ್ರೆ ನಿನ್ನ ಇಡೀ ಕುಟುಂಬವನ್ನ ಬಿಡೋದಿಲ್ಲ ,ನೀನು ನನ್ನ ರೇಪ್ ಮಾಡೋಕೆ ಬಂದಿದ್ಯ ಅಂತ ದೂರು ಕೊಡ್ತಿನಿ ಎಂದು ಸೂರಜ್ ನನ್ನ ಬಿಟ್ಟು ಕಳಿಸಿದ್ಲು. ನಂತರ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
PublicNext
24/08/2022 04:16 pm