ಬೆಂಗಳೂರು: ಒಂದು ವರ್ಷದಿಂದ ಮಿಸ್ಸಿಂಗ್ ಆಗಿದ್ದ ಮಹಿಳೆ ಕೇಸ್‌ನ ಚಾಮರಾಜ ಪೇಟೆ ಪೊಲೀಸ್ರು ಟ್ರೇಸ್ ಮಾಡಿದ್ದಾರೆ. ತನಿಖೆ ವೇಳೆ ಸಿಕ್ಕ ಒಂದು ಸುಳಿವು ಹಂತಕರನ್ನು ಕಂಬಿ ಹಿಂದೆ ಸರಿಯುವಂತೆ ಮಾಡಿದೆ. ಮಹಿಳೆ ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆರಂಭದಲ್ಲಿ ಮಹಿಳೆ ಪತ್ತೆ ಬಗ್ಗೆ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ. ಟಿ.ಗೊಲ್ಲಹಳ್ಳಿ ಮೂಲದ ಲಕ್ಷ್ಮೀ ಹಾಗೂ ಆರ್‌ಆರ್ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ನಾರಾಯಣ್ ಬಂಧಿತ ಆರೋಪಿಗಳಾಗಿದ್ದಾರೆ. ಚಂದ್ರಕಲಾ ಕೊಲೆಯಾಗಿದ್ದ ಮಹಿಳೆಯಾಗಿದ್ದಾಳೆ.
ಒಬ್ಬಂಟಿಯಾಗಿದ್ದ ಚಂದ್ರಕಲಾ ಚಾಮರಾಜಪೇಟೆಯ ವಿಠಲನಗರದ ಬಾಡಿಗೆ ಮನೆಯೊಂದರಲ್ಲಿ ಐದಾರು ವರ್ಷಗಳಿಂದ ವಾಸವಾಗಿದ್ದಳು. ಗೋಣಿಚೀಲ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಲಾಗೆ ಲಕ್ಷ್ಮೀ ಸ್ನೇಹಿತೆಯಾಗಿದ್ಳು. ಚಂದ್ರಕಲಾವ ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಚಂದ್ರಕಲಾಳ ಮೊಬೈಲ್ ಕೊನೆ ಬಾರಿ ಬ್ಯಾಟರಾಯನಪುರದಲ್ಲಿ ಸ್ವಿಚ್ ಆಫ್ ಆಗಿರುವುದು ಕಂಡುಬಂದಿತ್ತು. ಇದು ಹೊರತುಪಡಿಸಿದರೆ ಬೇರೆ ಯಾವ ಮಾಹಿತಿ ಇರಲಿಲ್ಲ. ಸ್ನೇಹಿತರು, ಸಂಬಂಧಿಕರು, ಕೆಲಸಮಾಡುವ ಸ್ಥಳ ಹೀಗೆ ನಿರಂತರವಾಗಿ ವಿಚಾರಣೆ ನಡೆಸಿದರೂ ಮಹಿಳೆಯ ಪತ್ತೆ ಬಗ್ಗೆ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಇತ್ತೀಚೆಗೆ ನಗರ ಪೊಲೀಸ್ ಆಯುಕ್ತರು ಅಪರಾಧ ಪರಾಮರ್ಶೆ ಸಭೆಯಲ್ಲಿ ನಾಪತ್ತೆಯಾಗದ ಪ್ರಕರಣಗಳ ಪತ್ತೆ ಮರು ತನಿಖೆ ನಡೆಸುವಂತೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೀಡಿದ ಸೂಚನೆ ಮೇರೆಗೆ ಮತ್ತೆ ತನಿಖೆ ನಡೆಸಿದ ಚಾಮರಾಜಪೇಟೆ ಪೊಲೀಸರು ಚಂದ್ರಕಲಾ ವಾಸವಾಗಿದ್ದ ಮನೆ ಮಾಲೀಕನನ್ನು ಪ್ರಶ್ನಿಸಿದಾಗ ಚಂದ್ರಕಲಾ ನಾಪತ್ತೆಯಾಗುವ ಮುನ್ನ ಮತ್ತೋರ್ವ ಮಹಿಳೆ ಮನೆಗೆ ಬಂದು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಸುಳಿವು ಆಧರಿಸಿ ತನಿಖೆ ನಡೆಸಿದ ಪೊಲೀಸರ ಲಕ್ಷ್ಮೀಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಪ್ರಶ್ನಿಸಿದಾಗ ಕಾಣೆಯಾಗಿದ್ದ ಚಂದ್ರಕಲಾ ಕೊಲೆಯಾಗಿರುವ ಬಗ್ಗೆ ಸಂಗತಿ ಗೊತ್ತಾಗಿದೆ.
ಆರೋಪಿತೆ ಲಕ್ಷ್ಮೀ ಪತಿ ನರಸಿಂಹಮೂರ್ತಿಗೆ ಸ್ನೇಹಿತನಾಗಿದ್ದ ರೌಡಿಶೀಟರ್ ನಾರಾಯಣ್ ಅಪರಾಧ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾಗ ಇಬ್ಬರ ಪರಿಚಯವಾಗಿತ್ತು. ಜೈಲಿನಿಂದ ಬಿಡುಗಡೆಯಾದಾಗ ಇಬ್ಬರ ಸ್ನೇಹ ಮುಂದುವರೆದಿತ್ತು. ಇದೇ ಸಲುಗೆ ಮೇರೆಗೆ ಮನೆಗೆ ನಾರಾಯಣ್ ಬಂದು ಹೋಗುತ್ತಿದ್ದ. ಈ ವೇಳೆ ಲಕ್ಷ್ಮೀಯೊಂದಿಗೆ ಸಲುಗೆ ಹೆಚ್ಚಾಗಿತ್ತು. ಇಬ್ಬರು ಜೊತೆಗೂಡಿ ಸಣ್ಣಪುಟ್ಟ ಹಣಕಾಸಿನ ವ್ಯವಹಾರಗಳಲ್ಲಿ ಭಾಗಿಯಾಗುತ್ತಿದ್ದರು. ಇದೇ ವೇಳೆ 50 ಸಾವಿರ ಹಣಕ್ಕೆ ನಾರಾಯಣ್ ಬೇಡಿಕೆಯಿಟ್ಟಿದ್ದ. ತನ್ನ ಸ್ನೇಹಿತೆ ಚಂದ್ರಕಲಾ ಬಳಿ ಚಿನ್ನಾಭರಣ ಇರುವ ಬಗ್ಗೆ ಅರಿತಿದ್ದ ಲಕ್ಷ್ಮೀ ನಾರಾಯಣ್ ಜೊತೆ ಸಂಚು ರೂಪಿಸಿದ್ದಾಳೆ. ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ನಾರಾಯಣ್ ಮದುವೆಯಾಗುವಂತೆ ಲಕ್ಷ್ಮೀ ಸೂಚಿಸಿದ್ದಳು. ಇದಕ್ಕೆ ಚಂದ್ರಕಲಾ ಒಪ್ಪಿಕೊಂಡಿದ್ದಳು. ಇಬ್ಬರು ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡು ಮಾತನಾಡುತ್ತಿದ್ದರು. ನೇರವಾಗಿ ನೋಡುವ ಉದ್ದೇಶ ಜೊತೆಗೆ ಹಾಗೇ ಮದುವೆ ಮಾಡಿಕೊಳ್ಳುವುದಾಗಿ ಮಹಿಳೆ ಚಿನ್ನಾಭರಣ ದೋಚುವ ಪ್ಲ್ಯಾನ್ ರೂಪಿಸಿಕೊಂಡಿದ್ದರು.
ಇದರಂತೆ ಕಳೆದ ವರ್ಷ ಜುಲೈ 27 ರಂದ ಚಂದ್ರಕಲಾ ಲಗೇಜ್ ಸಮೇತ ಮನೆ ಬಿಟ್ಟಿದ್ದಾರೆ. ಮನೆ ಬಿಡುವ ಮುನ್ನ ಸಂಬಂಧಿಕರಿಗೆ ಪೋನ್ ಮಾಡಿ ಮದ್ದೂರಿನಲ್ಲಿ ಸ್ನೇಹಿತೆಯ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದಾಳ ಪರಿಚಯಸ್ಥ ಆಟೊ ಹತ್ತಿ ಲಕ್ಷ್ಮೀ ಹಾಗೂ ನಾರಾಯಣ್ ಜೊತೆಗೂಡಿ ಮೂವರು ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತತಿ ಬಳಿ ಹೋಗಿದ್ರು. ನಿರ್ಜನ ಪ್ರದೇಶದಲ್ಲಿ ಸಮಯ ನೋಡಿಕೊಂಡು ವೇಲಿನಿಂದ ಕತ್ತು ಬಿಗಿದಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಹಾಕಿ ಸಾಯಿಸಿದ್ದಾರೆ. ಈ ಸಂಬಂಧ ಹಲಗೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಕೊಲೆ ಬಳಿಕ ಚಂದ್ರಕಲಾ ಬ್ಯಾಗ್ನಲ್ಲಿ ಚಿನ್ನಾಭರಣ ಇದೆಯಿದೆ ಎಂದು ಭಾವಿಸಿದ್ದ ಆರೋಪಿಗಳು ನಿರಾಸೆಯಾಗಿತ್ತು. ಬ್ಯಾಗಿನಲ್ಲಿ ಯಾವುದೇ ಚಿನ್ನಾಭರಣವಿರಲಿಲ್ಲ. ಇದರಿಂದ ಕಕ್ಕಾಬಿಕ್ಕಿಯಾದ ಹಂತಕರು ನಗರಕ್ಕೆ ವಾಪಸ್ ಆಗಿದ್ದಾರೆ. ಕೆಂಗೇರಿಯ ಕಂಬಿಪುರ ಬಳಿ ಬ್ಯಾಗ್ ಬಿಸಾಕಿದ್ದಾರೆ. ಸಿಮ್ ತೆಗೆದಿರಿಸಿಕೊಂಡು ಮೊಬೈಲ್ ಸಹ ಎಸೆದಿದ್ದಾರೆ. ಕೊಲೆ ಮಾಡಿ ನಾಲ್ಕು ದಿನ ಅಂತರದಲ್ಲಿ ಚಂದ್ರಕಲಾ ಮೊಬೈಲ್ ಸಿಮ್ ತನ್ನ ಮೊಬೈಲಿಗೆ ಹಾಕಿಕೊಂಡಿದ್ದರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದು ಸದ್ಯ ಹಲಗೂರು ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
PublicNext
24/08/2022 11:24 am