ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿತ್ಯ ದಾಖಲಾಗೋ ರೋಡ್ ರೇಜ್ ಪ್ರಕರಣಗಳಿಗೇನು ಕಮ್ಮಿ ಇಲ್ಲ. ಸಣ್ಣ ಪುಟ್ಟ ವಿಚಾರಕ್ಕೂ ವಾಹನ ಸವಾರಾರು ಕಿರಿಕ್ ಮಾಡಿಕೊಂಡು ಗಲಾಟೆಗಿಳಿಯುತ್ತಾರೆ. ನಗರದ ಗಡಿ ಭಾಗದ ಗ್ರಾಮದಲ್ಲಿ ಇಂತಹದ್ದೆ ಒಂದು ಘಟನೆ ನಡೆದಿದೆ.
ಲೇಔಟ್‌ನ ಕಿರಿದಾದ ರಸ್ತೆಯಲ್ಲಿ ಕಾರ್ ಅಡ್ಡ ಬಂದಿದ್ದಕ್ಕೆ ಕಾರ್ ಅಡ್ಡಗಟ್ಟಿ ರೌಡಿಗಳನ್ನ ಕರೆಸಿ ಹೊಡೆಸ್ತೀನಿ ಅಂತ ಬೆದರಿಕೆ ಹಾಕಿದ್ದಾರೆ ಆರೋಪ ಕೇಳಿ ಬಂದಿದೆ. ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ದೊಡ್ಡಗುಬ್ಬಿಯಲ್ಲಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಚಿಕ್ಕೇಗೌಡ ಎಂಬಾತನ ವಿರುದ್ಧ ಅದೇ ಗ್ರಾಮದ ಚಂದ್ರಶೇಖರ ದೂರು ನೀಡಿದ್ದಾರೆ.
ಡಿಸೆಂಬರ್ 11ರ ಸಂಜೆ ದೊಡ್ಡಗುಬ್ಬಿ ಗ್ರಾಮದ ರಸ್ತೆಯಲ್ಲಿ ಸಂತೆ ನಡೆಯುತ್ತಿತ್ತು. ಈ ವೇಳೆ ಚಿಕ್ಕೇಗೌಡ ಕಾರು ನಿಲ್ಲಿಸಿಕೊಂಡಿದ್ದಾರೆ. ಇತ್ತ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿ ದಟ್ಟಣೆ ಉಂಟಾಗಿದೆ. ಇನ್ನು ಚಂದ್ರಶೇಖರ್ ಟ್ರಾಫಿಕ್ ಜಾಮ್ ಕ್ಲಿಯರ್ ಆಗಲಿ ಅಂತ ತಮ್ಮ ಕಾರನ್ನ ರೈಟ್ ಸೈಡ್‌ಗೆ ತಂದಿದ್ದಾರೆ. ಇದೇ ಸಮಯಕ್ಕೆ ಚಿಕ್ಕೆಗೌಡ ಕಾರು ತಂದು ಅಡ್ಡಗಟ್ಟಿ ಚಂದ್ರಶೇಖರ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಅಷ್ಟೇ ಅಲ್ಲದೆ ರೌಡಿಗಳನ್ನು ಕರೆಸಿ ಕೊಲೆ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ರಂತೆ.
ಈ ಮುಂಚೆಯೂ ಚಿಕ್ಕೆಗೌಡ ಜಗಳ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಇನ್ನು ಈ ಸಣ್ಣ ವಿಚಾರ ಠಾಣೆ ಮೆಟ್ಟಿಲೇರಿದ್ದು ಚಿಕ್ಕೇಗೌಡನ ವಿರುದ್ಧ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ. ಸದ್ಯ ಕೊತ್ತನೂರು ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದ್ದು ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.
PublicNext
13/12/2024 11:38 am