ಬೆಂಗಳೂರು: ಇತ್ತಿಚೇಗೆ ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್ ನಾಲ್ಕನೇ ಮಹಡಿಯಿಂದ ತಾಯಿಯೇ ತನ್ನ ಮಗುವನ್ನ ಬಿಸಾಕಿ ಸಾಯಿಸಿದ ಪ್ರಕರಣ ನಡೆದಿತ್ತು. ಅದಾದ ನಂತರ ಕೋಣನಕುಂಟೆಯಲ್ಲಿ ಕ್ಯಾನ್ಸರ್ ಪೀಡಿತನೊಬ್ಬ ಪತ್ನಿ, ಮಗುವನ್ನ ಕೊಂದು ನೇಣಿಗೆ ಶರಣಾಗಿದ್ದ. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ದುರಂತಕ್ಕೆ ರಾಜಧಾನಿ ಸಾಕ್ಷಿಯಾಗಿದೆ.
ಸುಮಾರು ಮೂರೂವರೆ ವರ್ಷದ ಹೆಣ್ಣುಮಗುವನ್ನ ನೀರಿನ ಟಬ್‌ನಲ್ಲಿ ಮುಳುಗಿಸಿ ಹತ್ಯೆಮಾಡಿ ನಂತರ ತಾನು ಆತ್ಮಹತ್ಯೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವಿನಿಂದ ಬಚಾವ್ ಆದ ಮಹಿಳೆ ಸದ್ಯ ಖಾಸಗಿ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಭೂತಿಪುರದ ಬಾಡಿಗೆ ಮನೆಯೊಂದರಲ್ಲಿ ತಮಿಳುನಾಡು ಮೂಲದ ಗಾಯತ್ರಿದೇವಿ- ನರೇಂದ್ರನ್ ದಂಪತಿ ವಾಸವಾಗಿದ್ದರು. ಇವರ ದಾಂಪತ್ಯಕ್ಕೆ ಐದು ವರ್ಷ ತುಂಬಿತ್ತು. ಇದಕ್ಕೆ ಸಾಕ್ಷಿವೆಂಬಂತೆ ಮೂರುವರೆ ವರ್ಷದ ಸಂಯುಕ್ತಾ ಎಂಬ ಹೆಣ್ಣು ಮಗುವಿತ್ತು. ಜೀವನಕ್ಕಾಗಿ ಖಾಸಗಿ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ನರೇಂದ್ರನ್ ಕಾರ್ಯನಿರ್ವಹಿಸುತ್ತಿದ್ದರೆ ಪತ್ನಿ ಗೃಹಿಣಿಯಾಗಿದ್ದಳು. ಕೌಟುಂಬಿಕ ಕಲಹ ಹಿನ್ನೆಲೆ ನರೇಂದ್ರನ್ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ರು. ಈ ಹಿನ್ನೆಲೆ ಕಳೆದ 20 ದಿನಗಳ ಹಿಂದೆ ತಮಿಳುನಾಡಿನ ಈರೋಡ್‌ನಲ್ಲಿ ವಾಸವಾಗಿದ್ದ. ಈ ನಿಟ್ಟಿನಲ್ಲಿ ಊರಿಗೆ ಹೋಗಿದ್ದ ನರೇಂದ್ರನ್ ಸೋಮವಾರ ಮುಂಜಾನೆ ವಾಪಸ್ ಆಗಿದ್ದರು. ಮನೆ ಬಾಗಿಲು ತಟ್ಟಿದರೂ ಕದ ತೆರೆಯದ ಕಂಡು ಆತಂಕ ವ್ಯಕ್ತಪಡಿಸಿ ನರೇಂದ್ರನ್ ಬಲವಂತವಾಗಿ ಬಾಗಿಲು ತೆರೆದು ಒಳ ನುಗ್ಗಿದ್ದಾಗ ಅಲ್ಲೊಂದು ದೊಡ್ಡ ದುರಂತವೇ ಸಂಭವಿಸಿತ್ತು. ಮೂರುವರೆ ವರ್ಷದ ಮಗುವನ್ನ ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ಗಾಯಿತ್ರಿದೇವಿ ಫ್ಯಾನಿಗೆ ನೇಣು ಬಿಗಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಇದನ್ನ ನೋಡಿದ ನರೇಂದ್ರನ್ ಆತಂಕದಿಂದಲೇ ಪತ್ನಿಯನ್ನು ಕೆಳಗಿಳಿಸಿದಾಗ ಉಸಿರಾಡುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಮಗು ಹತ್ಯೆ ಮಾಡುವ ಮುನ್ನ ತಾಯಿ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದೆ. ತನಗೆ ಬಂದಿರುವ ಸಂಕಷ್ಟವನ್ನ ನಿಭಾಯಿಸುವ ಶಕ್ತಿ ನನ್ನಲ್ಲಿ ಇಲ್ಲ. ನಾನು ಸತ್ತರೆ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲ. ಹೀಗಾಗಿ ಮಗುವನ್ನ ಸಾಯಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
PublicNext
23/08/2022 10:32 am