ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಚ್ಎಸ್ಆರ್ ಲೇಔಟ್ ನೇಪಾಳಿ ಹಂತಕರು ಅಂದರ್; ವೃದ್ಧರೇ ಇವರ ಟಾರ್ಗೆಟ್!

ಬೆಂಗಳೂರು: ಅಫೆನ್ಸ್ ಮಾಡೋರಲ್ಲಿ ಈಗ ಸೆಕ್ಯೂರಿಟಿ ಗಾರ್ಡ್ಸ್ ಹೆಚ್ಚು ಎನ್ನಬಹುದು. ಅಷ್ಟರ ಮಟ್ಟಿಗೆ ನಗರದಲ್ಲಿ ನೇಪಾಳಿ ಮೂಲದ ವಾಚ್ ಮನ್ ಗಳು ಹಾವಳಿ ಎಬ್ಬಿಸ್ತಿದ್ದಾರೆ. ಯಾರೀಗೂ ಕೂಡ ತಮ್ಮ ಅಪಾರ್ಟ್‌ ಮೆಂಟ್ ಮುಂದೆ, ಮನೆಗಳ ಮುಂದೆ ಹಂತಕರು  ವಾಚ್ ಮನ್ ಕೆಲಸ ಮಾಡ್ತಿದ್ದಾರೆಂದು ತಿಳಿಯದ ರೀತಿಯಲ್ಲಿದ್ದು ಬಿಡ್ತಾರೆ. ಅಂತಹ  ಮತ್ತೊಂದಷ್ಟು ಅಫೆಂಡರ್ಸ್ ಅಂದರ್ ಆಗಿದ್ದಾರೆ.

ಆ.13ರಂದು ಹೆಚ್ ಎಸ್ ಆರ್ ಲೇಔಟ್ ನಲ್ಲಿ 83 ವರ್ಷದ ವೃದ್ಧೆ ಜಯಶ್ರೀ ಎಂಬವರ ಹತ್ಯೆ ನಡೆದಿತ್ತು. ಆ ಪ್ರಕರಣದ ಹಂತಕರು ಯಾರು ಎಂದು ಪೊಲೀಸರು ಹುಡುಕಿಕೊಂಡು ಹೋದಾಗ ಗೊತ್ತಾಗಿದ್ದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್!

ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಮತ್ತು ಸಹಚರರು ಸೇರಿಕೊಂಡು ಮನೆ ಮಾಲೀಕರನ್ನು ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಮನೆಯಲ್ಲಿದ್ದ ಅಷ್ಟೂ ಚಿನ್ನಾಭರಣ ದೋಚಿ ಪರಾರಿಯಾಗಿದ್ರು. ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಆರು ಜನ ಅಫೆಂಡರ್ಸ್ ಸಿಕ್ಕಿ ಬಿದ್ದಿದ್ದಾರೆ.

ನೇಪಾಳ ಮೂಲದ  ಶಿಬು ಕಟಾಯತ್, ಗಜೇಂದ್ರ, ಮುಖೇಶ್ ಕಡ್ಕಾ, ಕೇಶವ್ ಬುಡಾ, ಕಮಲ್ ಹಾಗೂ ಖಡಕ್ ಸಿಂಗ್ ಬಂಧಿತರು. ಹೆಚ್ ಎಸ್ ಆರ್ ಲೇಔಟ್ ನ ಆ ಮನೆಯಲ್ಲಿ ಸ್ವಲ್ಪ ದಿನ ನಿಯತ್ತಾಗಿ ಕೆಲಸ ಮಾಡಿಕೊಂಡಿದ್ರು. ಯಾವಾಗ ವೃದ್ಧೆಯ ಬಳಿ ನಗ- ನಗದು ತುಂಬಾ ಇದೆ ಎಂದು ಗೊತ್ತಾಯ್ತೋ ದೋಚೋ ಪ್ಲಾನ್ ಮಾಡಿದ್ರು. ಸಿಕ್ಕಿ ಬಿದ್ದಿರುವ ಆರೂ ಆರೋಪಿಗಳು ನೇಪಾಳದವರು. ಅವರಲ್ಲಿ ನಾಲ್ವರು ಸೆಕ್ಯೂರಿಟಿ ಗಾರ್ಡ್ ಗಳಾಗಿ ನಗರದಲ್ಲಿ ಕೆಲಸ ಮಾಡ್ತಿದ್ರೆ, ಇನ್ನುಳಿದ ಇಬ್ಬರನ್ನು ನೇಪಾಳದಿಂದ ಕುಕೃತ್ಯ ನಡೆಸಲೆಂದೇ ಕರೆಸಿಕೊಂಡಿದ್ದಾರಂತೆ!

ಇನ್ನು, ಚಿನ್ನಾಭರಣ ದೋಚಿ ಸೀದಾ ನೇಪಾಳಕ್ಕೆ ಪರಾರಿಯಾಗಲು ಮುಂದಾಗಿದ್ದವರನ್ನು ಲಕ್ನೋದಲ್ಲಿ ಪೊಲೀಸರು ಲಾಕ್ ಮಾಡಿದ್ದಾರೆ. ಇವರೆಲ್ಲ ವೃದ್ಧ ದಂಪತಿಗಳನ್ನೇ ಟಾರ್ಗೆಟ್ ಮಾಡ್ತಿದ್ದು, ಅವರ ಚಲನವಲನ ಗಮನಿಸಿ ನಂತರ ಅವರ ಜೊತೆ ಸಲುಗೆಯಿಂದ ಇರುವಂತೆ ನಟಿಸಿ, ಬಳಿಕ ತಮ್ಮ "ರಾಕ್ಷಸತ್ವ" ತೋರುತ್ತಿದ್ದರು!

- ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Shivu K
PublicNext

PublicNext

19/08/2022 09:31 pm

Cinque Terre

45.62 K

Cinque Terre

0

ಸಂಬಂಧಿತ ಸುದ್ದಿ