ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣಿ ಮಾಲೀಕನಿಂದ ರೈತನಿಗೆ ಜೀವ ಬೆದರಿಕೆ; ಜಮೀನು ಮೇಲೆ ಕಣ್ಣು!

ದೊಡ್ಡಬಳ್ಳಾಪುರ: ಬಡ ರೈತನ ಸಾಗುವಳಿ ಜಮೀನು ಮೇಲೆ ಕಣ್ಣಿಟ್ಟ ಗಣಿ ಮಾಲೀಕ, ರೈತನನ್ನ ಒಕ್ಕಲೆಬ್ಬಿಸಲು ಜೀವ ಬೆದರಿಕೆ ಹಾಕಿದ್ದಾನೆ. ರೈತನ ಪರವಾಗಿ ನಿಲ್ಲಬೇಕಿದ್ದ ಪೊಲೀಸರು ಗಣಿ ಮಾಲೀಕನ ಪರವಾಗಿ ನಿಂತಿದ್ದಾರೆಂದು ಸಾಗುವಳಿದಾರ ರೈತ ತನ್ನ ಅಳಲು ತೋಡಿಕೊಂಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಸಣ್ಣಮಾರನಹಳ್ಳಿ ರೈತ, ಗ್ರಾಮದ ಸರ್ವೆ 31ರಲ್ಲಿ ಎರಡು ಎಕರೆ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಸರ್ವೆ ನಂಬರ್ 31 ಸರ್ಕಾರಿ ಗೋಮಾಳ ಜಾಗವಾಗಿದ್ದು, ತಿಮ್ಮರಾಯಪ್ಪ ಫಾರಂ 57 ಅರ್ಜಿ ಹಾಕೊಂಡಿದ್ದಾರೆ. ಇವರ ಜಮೀನು ಪಕ್ಕದಲ್ಲಿಯೇ ಕೆ.ಕೆ. ಕೃಷ್ಣಪ್ಪ ಎಂಬಾತನಿಗೆ 35 ಗುಂಟೆ ಜಾಗ ಮಂಜೂರಾಗಿದೆ.

ಕೃಷಿ ಕೆಲಸಕ್ಕೆ ಮಂಜೂರಾದ ಜಮೀನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಿ ಕೋಟಿ ಕೋಟಿ ಹಣ ಮಾಡಿದ್ದಾನೆ. ಈಗ ಪಕ್ಕದಲ್ಲಿರುವ ತಿಮ್ಮರಾಯಪ್ಪರ ಸಾಗುವಳಿ ಜಮೀನು ಮೇಲೆ ಕಣ್ಣಿಟ್ಟಿರುವ ಕೆ.ಕೆ. ಕೃಷ್ಣಪ್ಪ, ತಿಮ್ಮರಾಯಪ್ಪ ಮೇಲೆ ಬೆದರಿಕೆ ಹಾಕುತ್ತಿದ್ದಾನೆಂದು ಆರೋಪಿಸಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದಿರುವ ತಿಮ್ಮರಾಯಪ್ಪ ಭೂಮಿಯನ್ನ ಸಮತಟ್ಟು ಮಾಡುತ್ತಿದ್ದಾರೆ. ಈ ಜಮೀನು ಕಬಳಿಸಲು ಸಂಚು ನಡೆಸಿರುವ ಕೆ.ಕೆ. ಕೃಷ್ಣಪ್ಪ ಜೀವ ಬೆದರಿಕೆ ಹಾಕಿದ್ದಾನೆ. ರಕ್ಷಣೆ ನೀಡ ಬೇಕಾದ ಪೊಲೀಸರು ಸಹ ಕೆ.ಕೆ.ಕೃಷ್ಣಪ್ಪನ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ತಿಮ್ಮರಾಯಪ್ಪ ತಮ್ಮ ಅಸಹಾಯಕತೆ ತೋಡಿಕೊಂಡರು.

ಸ್ವಂತ ಕೃಷಿ ಭೂಮಿ ಹೊಂದಬೇಕೆನ್ನುವ ಕನಸು ತಿಮ್ಮರಾಯಪ್ಪ ಅವರದ್ದು. ಆದರೆ, ಬಲಾಢ್ಯನ ಧನದಾಹದಿಂದ ಅವರ ಕನಸು ಕನಸಾಗಿಯೇ ಉಳಿದು ಬಿಡುತ್ತೋ ಎಂಬ ಆತಂಕ ಬಡ ರೈತನನ್ನ ಕಾಡುತ್ತಿದೆ.

Edited By : Manjunath H D
Kshetra Samachara

Kshetra Samachara

14/08/2022 11:43 am

Cinque Terre

2.57 K

Cinque Terre

0

ಸಂಬಂಧಿತ ಸುದ್ದಿ