ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ : ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ದೊಡ್ಡಬಳ್ಳಾಪುರ: ತಾಲ್ಲೂಕಿನ ಹಲವು ಗ್ರಾಮಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿ ಕಛೇರಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಧ್ವಜ ನೀತಿ ಸಂಹಿತೆಯ ಪಾಲನೆಯಾಗಿಲ್ಲ. ರಾಷ್ಟ್ರಧ್ವಜ ಹಾರಿಸಿಲ್ಲ ಮತ್ತು ಮಾಸಿದ ಬಾವುಟ ಹಾರಿಸುವುದರ ಮೂಲಕ ರಾಷ್ಟ್ರ ಧ್ವಜಕ್ಕೆ ಅವಮಾನ ಎಸಗಿದ್ದಾರೆ.

ಹೌದು ಸರ್ಕಾರಿ ಕಚೇರಿಗಳ ಆವರಣದಲ್ಲಿ ಪ್ರತಿ ನಿತ್ಯ ರಾಷ್ಟ್ರಧ್ವಜ ಹಾರಿಸಲು ಅದರದ್ದೇ ಆದ ಧ್ವಜ ನೀತಿ ಸಂಹಿತೆ ಇದೆ. ಪ್ರತಿನಿತ್ಯ ಬೆಳಗ್ಗೆ ಆರೋಹಣ ಮತ್ತು ಅವರೋಹಣ ಮಾಡುವ ಸಲುವಾಗಿ ದಿನದ ಭತ್ಯೆ ಆಧಾರದಲ್ಲಿ ಫ್ಲಾಗ್ ಮ್ಯಾನ್ ರನ್ನ ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳಲ್ಲೂ ನೇಮಕ ಮಾಡಿರುತ್ತದೆ.

ಆದರೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವು ಗ್ರಾಮಪಂಚಾಯ್ತಿ ಕಟ್ಟಡಗಳ ಆವರಣದಲ್ಲಿ ಧ್ವಜ ಹಾರಿಸಲು ಸರ್ಕಾರದಿಂದ ತರಬೇತಿ ಪಡೆದ ಫ್ಲಾಗ್ ಮ್ಯಾನ್ ಇದ್ದರೂ ಬಾವುಟಗಳ ಹಾರಿಸುತ್ತಿಲ್ಲ. ಕೆಲವೊಂದು ಕಚೇರಿಗಳ ಮುಂದೆ ಹಲವು ತಿಂಗಳುಗಳಾದರೂ ಮಾಸಿದ ಧ್ವಜವನ್ನ ಧ್ವಜ ಸ್ಥಂಭ ದಲ್ಲಿ ಹಾಗೇ ಬಿಟ್ಟು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದು ಕಂಡು ಬಂದಿದೆ.

ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮಪಂಚಾಯ್ತಿ ಆವರಣದಲ್ಲಿ ಮಾಸಿದ ಬಾವುಟ ಹಾರಾಟ, ಹುಲಿಕುಂಟೆ ಗ್ರಾಮಪಂಚಾಯ್ತಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ, ಹೆಗ್ಗಡೆಹಳ್ಳಿ ಪಂಚಾಯ್ತಿ ಆವರಣದಲ್ಲಿ, ಸರ್ಕಾರಿ ಕಚೇರಿ ಸಮಯದಲ್ಲೇ ಬಾವುಟ ಹಾರಾಟ ಮಾಡದೇ ರಾಷ್ಟ್ರಧ್ವಜಕ್ಕೆ ಅಪಮಾನಮಾಡಲಾಗಿದೆ.

ಇದೇ ವಿಚಾರವಾಗಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಲಕ್ಷ್ಮಿಪತಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಆರೋಹಣ ಮತ್ತು ಅವರೋಹಣ ಮಾಡುವುದು, ಜೊತೆಗೆ ಧ್ವಜವನ್ನ ಮಡಚಿಡುವುದಕ್ಕೆ ತರಬೇತಿ ನೀಡಿ ವ್ಯಕ್ತಿ ನೇಮಕ ಮಾಡಲಾಗುತ್ತದೆ, ಆದರೆ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸದೆ ಇರುವುದು ಮತ್ತು ಮಾಸಿದ, ಹಾಳಾದ ಬಾವುಟ ಹಾರಿಸುವುದು ಅಕ್ಷಮ್ಯ ಅಪರಾಧ ಅಂಥವರ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Edited By : Shivu K
PublicNext

PublicNext

11/08/2022 10:28 am

Cinque Terre

32.68 K

Cinque Terre

1

ಸಂಬಂಧಿತ ಸುದ್ದಿ