ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಈ ರಸ್ತೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ಈ ರಸ್ತೆಯಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲ ಹಾಗಾಗಿ ಕಳ್ಳತನವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಸದ್ಯ ಬೆಳ್ಳಂ ಬೆಳಗ್ಗೆ ಕಳ್ಳತನವಾಗಿದೆ. ಮೊಬೈಲ್ ಗಳು ಮತ್ತು ಸರ ಎಗರಿಸಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಈ ರಸ್ತೆಯಲ್ಲಿ ಒಂದು ಸಿಸಿ ಕ್ಯಾಮೆರಾ ಇಲ್ದೆ ಇರೋ ಕಾರಣ ಕಳ್ಳರನ್ನ ಹಿಡಿಯೋದು ಬಹಳ ಕಷ್ಟವಾಗಿದೆ. ಪ್ರತಿದಿನ ಒಂದಲ್ಲ ಒಂದು ರಾಬರಿ ಆಗಿತ್ತಾನೆ ಇರುತ್ತೆ. ಇದರ ಬಗ್ಗೆ ಯಾವೊಬ್ಬ ಸ್ಥಳೀಯ ಅಧಿಕಾರಿಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇಂದು ಕಳ್ಳತನ ಮಾಡ್ತಾರೆ. ಮುಂದೆ ಪ್ರಾಣ ತೆಗುದ್ರೆ ಏನ್ ಮಾಡೋದು ಎಂದು ಅಲ್ಲಿನ ಜನ ಚಿಂತೆಯಲ್ಲಿದ್ದಾರೆ.
PublicNext
10/08/2022 08:55 pm